By: Oneindia Kannada Video Team
Published : November 28, 2017, 11:04

ಚುನಾವಣೆಗೆ ನರೇಂದ್ರ ಮೋದಿ ಹೊಸ ಅಸ್ತ್ರ ನಮಸ್ಕಾರ ಬಿಜೆಪಿಗೆ ವೋಟ್ ಮಾಡಿ

Subscribe to Oneindia Kannada

ನಮಸ್ಕಾರದ ಭಂಗಿ ಮೂಲಕ ಹೊಸ ಅಸ್ತ್ರ ಬಿಟ್ಟ ನರೇಂದ್ರ ಮೋದಿ! "ನಮ್ಮ ಮನೆಯ ದುರಸ್ತಿ ಮಾಡುವಾಗ ಸಮಸ್ಯೆ ಎದುರಿಸುತ್ತೀವಲ್ವಾ? ಇದೀಗ ಇಡೀ ದೇಶದ ದುರಸ್ತಿ ಆಗುತ್ತಿದೆ. ಆದ್ದರಿಂದ ದಯವಿಟ್ಟು ಸಹಿಸಿಕೊಳ್ಳಿ ಮತ್ತು ಬಿಜೆಪಿಯನ್ನು ಬೆಂಬಲಿಸಿ" ಎಂಬ ಒಕ್ಕಣೆಯೊಂದಿಗೆ ಕೈ ಮುಗಿದು ನಿಂತಿರುವ ಮೋದಿ ಪೋಸ್ಟರ್ ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮೋದಿ ಪೋಸ್ಟರ್ ಗಳನ್ನು ನೋಡಿದರೆ ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಕೈ ಮುಗಿದು, ವಿಧೇಯತೆಯಿಂದ ನಿಂತಿರುವ ಮೋದಿ ಅವರ ಭಂಗಿಯನ್ನು ಫೋಟೋಗಳಲ್ಲಿ ನೋಡಿದರೆ, ಮೊದಲ ಸಲಕ್ಕೆ ಹೀಗೆ ಕಾಣಿಸಿಕೊಂಡಂತೆ ಅನಿಸುತ್ತದೆ.ಕೆಲವೇ ತಿಂಗಳ ಹಿಂದಿನವರೆಗೆ ಗುಜರಾತ್ ಚುನಾವಣೆಯು ಮೋದಿ ಪಾಲಿನ ಸುಲಭ ತುತ್ತು ಅಂತಲೇ ಬಿಂಬಿತವಾಗಿತ್ತು. ಆದರೆ ಕೆಲ ವಾರಗಳಲ್ಲೇ ಬದಲಾದ ಪರಿಸ್ಥಿತಿಗಳಿಂದ ಈ ಚುನಾವಣೆ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಲೇ ಬೇಕಾಗಿದೆ. ಇದು ಕೇವಲ ಮಾಧ್ಯಮಗಳ ವಿಶ್ಲೇಷಣೆ ಅಂತ ತೆಗೆದುಹಾಕುವಂತಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!