By: Oneindia Kannada Video Team
Published : October 25, 2017, 02:56

ನರೇಂದ್ರ ಮೋದಿಯ ಕನಸನ್ನ ನುಚ್ಚುನೂರಾಗಿಸಿದ ಮಧ್ಯಪ್ರದೇಶದ ಸಿಎಂ

Subscribe to Oneindia Kannada

ನರೇಂದ್ರ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಉದ್ಯಮಿಗಳಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಭಾರತದ ಕೈಗಾರಿಕೋದ್ಯಮಿಗಳು ಅಪಾರ ಪ್ರಮಾಣದ ಹೂಡಿಕೆ ಮಾಡಲು ಸಿದ್ಧ ಎಂದು ತಿಳಿಸಿದ್ದಾರೆ. ಸಮಾಜದ ಒಳಿತಿಗೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಇ ಆಡಳಿತ ಸುಲಭ ಆಡಳಿತ. ಅಕ್ಕಾಗಿಯೇ ಇಂಥ ಅಭಿಯಾನಗಳು ಎಂದು ಪುನರುಚ್ಚಾರ ಮಾಡಿದರು.ಭಾರತ ಸೇರಿದಂತೆ ವಿದೇಶದ ಹೂಡಿಕೆದಾರರಿಗೆ ಮೋದಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಭಾರತದ ಎಲ್ಲ ಪ್ರಮುಖ ಕಂಪನಿಗಳ ಮುಖ್ಯಸ್ಥರು ಹಾಜರಿದ್ದರು. ಜುಲೈ ಮೊದಲ ವಾರವನ್ನು ಡಿಜಿಟಲ್ ಇಂಡಿಯಾ ವಾರ ಎಂದು ಆಚರಣೆ ಮಾಡಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಅಭಿಯಾನದ ಜತೆ ಡಿಜಿಟಲ್ ಇಂಡಿಯಾ ಮತ್ತಿ ಡಿಸೈನ್ ಇನ ಇಂಡಿಯಾ ಸೇರಿಕೊಂಡರೆ ಮಾಹಿತಿ ಮತ್ತು ತಂತ್ರಜ್ಞಾನಕ್ಕಾಗಿ ಯಾವ ದೇಶದ ಬಳಿಯೂ ಕೈ ಒಡ್ಡಬೇಕಾದ ಅಗತ್ಯ ಇರುವುದಿಲ್ಲ ಎಂದು ನರೇಂದ್ರ ಮೋದಿ ಹೇಳಿದರು. ಇದೆಲ್ಲ ಆದಮೇಲೆ ಇದೀಗ ಮಧ್ಯಪ್ರದೇಶದ ಸಿ ಎಂ ಶಿವರಾಜ್ ಸಿಂಗ್ ಚೌಹಾನ್ ನರೇಂದ್ರ ಮೋದಿಯವರ ಈ ಕನಸಿಗೆ ತಣ್ಣೀರೆರಚಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!