By : Oneindia Kannada Video Team
Published : January 10, 2018, 01:13

ನರೇಂದ್ರ ಮೋದಿ ಕೊಡುಗೆ : ಭಾರತದ ಹಜ್ ಕೋಟಾ ಏರಿಸಿದ ಸೌದಿ

ಪ್ರತಿ ವರ್ಷ ಪವಿತ್ರ ಹಜ್ ಯಾತ್ರೆಗೆ ಭಾರತದಿಂದ ತೆರಳುವ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಬೇಡಿಕೆ ಬರುತ್ತಿತ್ತು. ಮೋದಿ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿದ್ದು, ಭಾರತದಿಂದ ಪ್ರತಿ ವರ್ಷ ಹಜ್ ಯಾತ್ರೆಗೆ ತೆರಳುವ ಭಾರತೀಯರ ಸಂಖ್ಯಾ ಮಿತಿ ಏರಿಕೆ ಮಾಡಿದೆ. ಇತ್ತೀಚಿನ ಮನ್ ಕಿ ಬಾತ್ ನಲ್ಲಿ ಮೋದಿ ಅವರು ಈ ಬಗ್ಗೆ ಪ್ರಸ್ತಾಪಿಸಿದ್ದರು. ಮಹಿಳೆಯರಿಗೆ ಹಜ್ ಯಾತ್ರೆ ಕೈಗೊಳ್ಳುವ ಅವಕಾಶವನ್ನು ಸರ್ಕಾರ ನೀಡುತ್ತಿದೆ. 5,000 ಹೆಚ್ಚುವರಿ ಹಜ್ ಯಾತ್ರಿಕರಿಗೆ ಮೆಕ್ಕಾಗೆ ಪ್ರಯಾಣ ಭಾಗ್ಯ ಒದಗಿಸಲು ಮುಂದಾಗಿರುವ ಭಾರತ ಸರ್ಕಾರದ ಕ್ರಮಕ್ಕೆ ಸೌದಿ ಅರೇಬಿಯಾ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ, ಹಜ್ ಯಾತ್ರಾರ್ಥಿಗಳ ಕೋಟಾ ಈಗ 1,75,025ಕ್ಕೇರಲಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ ಭಾರತೀಯ ಹಜ್ ಯಾತ್ರಿಕರ ಕೋಟಾದಲ್ಲಿ ಭಾರಿ ಏರಿಕೆಗೆ ಅವಕಾಶ ಸಿಕ್ಕಿದೆ ಎಂದು ನಖ್ವಿ ತಿಳಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!