By: Oneindia Kannada Video Team
Published : October 30, 2017, 12:46

ನರೇಂದ್ರ ಮೋದಿ ಹಾಗು ಯೋಗಿ ಆದಿತ್ಯನಾಥ್ ಮುಂದಿನ ಟಾರ್ಗೆಟ್ | ಯಾರಿಗೆ?

Subscribe to Oneindia Kannada

ಲಷ್ಕರ್ ಇ ತೋಯ್ಬಾದ 10 ಮಂದಿ ಉಗ್ರರ ತಂಡವು ಪಾಕ್ ಆಕ್ರಮಿತ ಕಾಶ್ಮೀರದ ಮುಝಾಫರಾಬಾದ್ ನಲ್ಲಿ ಬೀಡುಬಿಟ್ಟಿದೆ. ಗುಜರಾತ್ ಸಮುದ್ರ ತೀರದ ಮೂಲಕ ಭಾರತ ಪ್ರವೇಶಿಸಲು ಹೊಂಚು ಹಾಕುತ್ತಿದ್ದು, ಪ್ರಧಾನಿ ಮೋದಿ ಇವರ ಮುಖ್ಯ ಟಾರ್ಗೆಟ್. ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ತೆರಳುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟಾರ್ಗೆಟ್ ಮಾಡಿಕೊಂಡಿರುವ 10 ಮಂದಿ ಉಗ್ರರ ತಂಡ ಬಗ್ಗೆ ಈ ಹಿಂದೆ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿತ್ತು.ಮೀನುಗಾರರ ವೇಷದಲ್ಲಿ ದೇಶ ಪ್ರವೇಶಿಸಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮಾವೇಶವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್​ಐ ಸಂಚು ನಡೆಸಿದೆ ಎಂದು ಗುಪ್ತಚರ ದಳ ಬಹಿರಂಗಪಡಿಸಿತ್ತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!