By : Oneindia Kannada Video Team
Published : March 05, 2018, 04:30

ಕೇರಳ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಮೋದಿ ಕೊಟ್ಟ ವಾರ್ನಿಂಗ್

ತ್ರಿಪುರಾದಲ್ಲಿ ಪ್ರಾಮಾಣಿಕ ವ್ಯಕ್ತಿಯೆಂದೇ ಖ್ಯಾತಿ ಪಡೆದಿದ್ದ ಮಾಣಿಕ್ ಸರ್ಕಾರ್ ಪತನಗೊಂಡ ನಂತರ, ದೇಶದಲ್ಲಿ ಈಗ ಕಮ್ಯೂನಿಸ್ಟರ ಸರಕಾರ ಉಳಿದಿರುವುದು ದಕ್ಷಿಣದ ಕೇರಳದಲ್ಲಿ ಮಾತ್ರ. ತ್ರಿಪುರಾದಲ್ಲಿ ಬಿಜೆಪಿ, ಸಿಪಿಐ(ಎಂ) ಸರಕಾರದ ವಿರುದ್ದ ದಿಗ್ವಿಜಯ ಸಾಧಿಸಿತ್ತು. ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ, ದೆಹಲಿಯಲ್ಲಿ ನೂತನವಾಗಿ ನಿರ್ಮಿತವಾಗಿರುವ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ ಪರೋಕ್ಷವಾಗಿ ಕೇರಳದ ಪಿಣರಾಯಿ ವಿಜಯನ್ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!