By : Oneindia Kannada Video Team
Published : December 18, 2017, 05:54

ಕರ್ನಾಟಕದತ್ತ ಮೋದಿ ಅಮಿತ್ ಶಾ ಮುಂದಿನ ಪಯಣ

ಹಲಿಯ ಕೋಟೆಯ ಮೇಲೆ ನಿಂತು ದೇಶದ ಒಂದೊಂದೇ ರಾಜ್ಯದಲ್ಲಿ ಬಿಜೆಪಿ ಬಾವುಟ ನೆಟ್ಟು ಬರುತ್ತಿರುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜೋಡಿಗೆ ಮುಂದಿನ ಹಾಗೂ ತಕ್ಷಣದ ಗುರಿ ಕರ್ನಾಟಕ ಆಗಲಿದೆ. ತವರಿನಲ್ಲಿ ಪ್ರಯಾಸದ ಗೆಲುವು ಪಡೆದ ದಣಿವು ತೀರಿದ ಬಳಿಕ ದಕ್ಷಿಣದತ್ತ ಮುಖ ಮಾಡಲಿದೆ ಮೋದಿ ಅಶ್ವಮೇಧದ ಕುದುರೆ. ಕಾಂಗ್ರೆಸ್ ಎಂಬ ಹಳೇ ಕೋಟೆಯ ಒಂದೊಂದೇ ಗೋಡೆ ಕೆಡವಿ ನಾಮಾವಶೇಷ ಮಾಡುವ ಶಪಥ ಮಾಡಿರುವ ಈ ಜೋಡಿ, ಕರ್ನಾಟಕದ ವಿಚಾರದಲ್ಲಿ ರಣತಂತ್ರ ಬದಲಿಸಿಕೊಳ್ಳ ಬೇಕಾಗುತ್ತದಾ? ಗುಜರಾತ್ ನಲ್ಲಿ ಕಾಂಗ್ರೆಸ್ ಬಡಿದಾಡಿ ಪಡೆದ ಈ ಮಟ್ಟದ ಯಶಸ್ಸು ಕರ್ನಾಟಕದ ಕೈ ಕಾರ್ಯಕರ್ತರಲ್ಲಿ ಸ್ಥೈರ್ಯ ತುಂಬಲಿದೆಯಾ? ಎಂಬ ಪ್ರಶ್ನೆ ಕೂಡ ಇದೆ.ಅಂದಹಾಗೆ, ಒಂಟೆಯನ್ನು ಟೆಂಟ್ ನಲ್ಲಿ ಬಿಟ್ಟುಕೊಂಡ ಹಾಗೆ ಎಂಬ ಮಾತೊಂದಿದೆ. ಮೊದಲಿಗೆ ತಲೆ, ಆ ನಂತರ ಡುಬ್ಬ, ಆ ಮೇಲೆ ಇಡೀ ದೇಹವನ್ನು ಟೆಂಟ್ ನೊಳಗೆ ತಂದು, ಅದಕ್ಕೂ ಮುನ್ನ ಒಳಗಿದ್ದವರನ್ನು ಹೊರ ದಬ್ಬುವುದಕ್ಕೆ ಈ ಹೋಲಿಕೆ ಮಾಡಲಾಗುತ್ತದೆ. ಉತ್ತರ ಭಾರತದಲ್ಲಿ ಬಿಜೆಪಿ ಟೆಂಟ್ ನೊಳಗೆ ಬಿಟ್ಟುಕೊಂಡ ಒಂಟೆಯೇ.ಆದ್ದರಿಂದಲೇ ಉತ್ತರದ ಬಹುತೇಕ ರಾಜ್ಯಗಳಲ್ಲಿ ಕೇಸರಿ ಕೇಸರಿ ರಾರಾಜಿಸುತ್ತಿದೆ. ಅಲ್ಲೆಲ್ಲ ಬಿಜೆಪಿ ಎಂಬ ಒಂಟೆ ಈಗಾಗಲೇ ಟೆಂಟ್ ಒಳಗಿದೆ. ಆದರೆ ದಕ್ಷಿಣ ಭಾರತದಲ್ಲಿ ಸ್ಥಿತಿ ಸ್ವಲ್ಪ ಭಿನ್ನ. ಆ ಹಿನ್ನೆಲೆಯಲ್ಲಿ 'ಡಿಸೆಂಬರ್ 18'ರ ಫಲಿತಾಂಶ ಕರ್ನಾಟಕದ ಪಾಲಿಗೆ ಏನನ್ನು ಧ್ವನಿಸುತ್ತದೆ ಎಂಬುದರ ವಿಶ್ಲೇಷಣೆ ಇಲ್ಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!