By : Oneindia Kannada Video Team
Published : October 26, 2017, 01:49

ಮೈಸೂರು ಮೃಗಾಲಯದಲ್ಲಿ ಚಿರತೆ : ಆತಂಕದ ವಾತಾವರಣ

'ಮೈಸೂರು ಮೃಗಾಲಯದಿಂದ ಯಾವುದೇ ಚಿರತೆ ತಪ್ಪಿಸಿಕೊಂಡಿಲ್ಲ. ಬೇರೆ ಕಡೆಯಿಂದ ಬಂದ ಚಿರತೆ ಮೃಗಾಲಯಕ್ಕೆ ನುಗ್ಗಿದೆ. ಕಾರಂಜಿ ಕೆರೆಯ ಬಳಿಯ ದ್ವಾರದಿಂದ ಮೃಗಾಲಯಕ್ಕೆ ನುಗ್ಗಿರುವ ಸಾಧ್ಯತೆ ಇದೆ' ಎಂದು ಒನ್ ಇಂಡಿಯಾಕ್ಕೆ ಮೃಗಾಲಯದ ನಿರ್ದೇಶಕ ರವಿಶಂಕರ್ ಮಾಹಿತಿ ನೀಡಿದರು. ಚಾಮುಂಡಿ ಬೆಟ್ಟದಿಂದ ಚಿರತೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಅರವಳಿಕೆ ಮದ್ದು ನೀಡಿ ಚಿರತೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃಗಾಲಯದಲ್ಲಿದ್ದ ಪ್ರವಾಸಿಗರನ್ನು ಹೊರಕ್ಕೆ ಕಳಿಸಲಾಗಿದೆ. :ಮೈಸೂರು ಮೃಗಾಲಯದಿಂದ ಚಿರತೆ ತಪ್ಪಿಸಿಕೊಂಡಿದ್ದು, ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಮೃಗಾಲಯದ ಸಿಬ್ಬಂದಿ ಚಿರತೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ.ಗುರುವಾರ ಬೆಳಗ್ಗೆ ಮೃಗಾಲಯದ ಬೋನಿನಿಂದ ಚಿರತೆ ತಪ್ಪಿಸಿಕೊಂಡು ಹೊರ ಬಂದಿದ್ದು, ಮೃಗಾಲಯದ ಆವರಣದಲ್ಲಿನ ಮರವೇರಿ ಕುಳಿತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಮೃಗಾಲಯಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಇನ್ನಷ್ಟು ಮಾಹಿತಿಗೆ ಈ ವೀಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!