By : Oneindia Kannada Video Team
Published : September 23, 2017, 03:54

ನವರಾತ್ರಿ ಹಬ್ಬದಂದು ಮನೆ ಸ್ವಚ್ಛವಾಗಿದ್ರೆ ದುರ್ಗೆ ಒಲೀತಾಳೆ

ನೋಡನೋಡುತ್ತಿದ್ದಂತೆ ಮತ್ತೆ ನವರಾತ್ರಿ ಬಂದೇ ಬಿಟ್ಟಿದೆ. ತಾಯಿ ದುರ್ಗೆಯ ಪೂಜೆಗೆ ಒಂಭತ್ತು ದಿನಗಳನ್ನು ಮೀಸಲಿಡುವಂತಹ ನವರಾತ್ರಿ ವೇಳೆ ಹಲವಾರು ವಿಧದ ಕಾರ್ಯಕ್ರಮಗಳು ನಡೆಯುವುದು. ಮನೆಯಲ್ಲಿ ದುರ್ಗೆಯ ಮೂರ್ತಿ ತಂದು ಆರಾಧಿಸಲು ಪ್ರತಿಯೊಬ್ಬರು ಕಾತರದಿಂದ ಇದ್ದಾರೆ. ದುರ್ಗಾ ಪೂಜೆಗಳು ಸಾರ್ವಜನಿಕವಾಗಿ ನಡೆಯುವುದು ಹೆಚ್ಚಾದರೂ ಕೆಲವೊಂದು ಕಡೆ ಮನೆಗೆ ತಂದು ದುರ್ಗೆಯ ಮೂರ್ತಿಗೆ ಪೂಜೆ ಮಾಡಲಾಗುವುದು. ದುರ್ಗೆಯ ಮೂರ್ತಿಯ ಮನೆಗೆ ತರುವ ಮೊದಲು ಮನೆಯನ್ನು ಅಲಂಕರಿಸುವುದು ಅತೀ ಅಗತ್ಯ. ಇದಕ್ಕೆ ಮೊದಲು ಮನೆಯನ್ನು ಸ್ವಚ್ಛಗೊಳಿಸಿ, ಬಣ್ಣಬಳಿದು ಶೃಂಗರಿಸಬೇಕು. ಯಾಕೆಂದರೆ ಸ್ವಚ್ಛತೆಯಿಲ್ಲದೆಡೆ ದೇವರು ಕೂಡ ಬರುವುದಿಲ್ಲ. ಸಂಪೂರ್ಣ ಮನೆಯನ್ನು ಸ್ವಚ್ಛಗೊಳಿಸುವುದರೊಂದಿಗೆ ಪೂಜೆಯ ಮನೆಯನ್ನು ಸ್ವಚ್ಛಗೊಳಿಸುವುದು ಹೇಗೆ ಎಂದು ನಿಮಗೆ ಈ ವಿಡಿಯೋದಲ್ಲಿ ಹೇಳಿಕೊಡಲಾಗಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!