By: Oneindia Kannada Video Team
Published : February 08, 2018, 02:49

ಮೋದಿಯವರ ವಿವಾದಾತ್ಮಕ ಪಕೋಡ ಹೇಳಿಕೆ ಇಲ್ಲಿದೆ ಪಕೋಡ ಓನರ್ ಕಥೆ

Subscribe to Oneindia Kannada

ಪ್ರಧಾನಿ ನರೇಂದ್ರ ಮೋದಿ ಅವರ ಪಕೋಡಾ ಹೇಳಿಕೆ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಮೋದಿ ಅವರ ಪಕೋಡಾ ಹೇಳಿಕೆ ಬಗ್ಗೆ ಪರ ವಿರೋಧ ಚರ್ಚೆಗಳು ಕಾವು ಪಡೆದುಕೊಳ್ಳುತ್ತಿದೆ. ಇನ್ನೊಂದೆಡೆ ಮೋದಿ ಅವರ ಹೇಳಿಕೆ ವಿರೋಧಿಸಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೀದಿಗಿಳಿದು ಪಕೋಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕ ದಲ್ಲಿ ಮೋದಿ ಅವರ ಪಕೋಡಾ ಹೇಳಿಕೆ ರಾಜಕೀಯ ಮುಖಂಡರ ವಾಗ್ವಾದಕ್ಕೆ ವೇದಿಕೆ ಯಾಗುತ್ತಿದೆ. ರಾಜಕೀಯ ಪಕ್ಷಗಳ ಈ ಪಕೋಡಾ ಜಟಾಪಟಿ, ಪಕೋಡಾ ಮಾರಾಟಗಾರರನ್ನು ಕೆರಳಿಸಿದೆ. ಪಕೋಡಾ ಮಾರಾಟ ಭಿಕ್ಷಾಟನೆಗೆ ಹೋಲಿಸಿರುವುದುರ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಿರುದ್ಯೋಗಿಯಾಗಿರುವುದಕ್ಕಿಂತ ಪಕೋಡಾ ಮಾರುವುದೇ ಲೇಸು ಎನ್ನುವುದು ಪಕೋಡಾ ಮಾರಾಟಗಾರರ ಅಭಿಮತ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!