By : Oneindia Kannada Video Team
Published : January 06, 2018, 05:00

ಮೋದಿ ಸರ್ಕಾರಕ್ಕಿದೆ ಸವಾಲಾಗಿರೋ ಜಿಡಿಪಿ ದರ

ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ಬೆಳವಣಿಗೆ 2017-18 ನೇ ಹಣಕಾಸು ವರ್ಷದಲ್ಲಿ 6.5 ಕ್ಕೆ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಸೆಂಟ್ರಲ್ ಸ್ಟೆಟಿಸ್ಟಿಕ್ಸ್ ಆಫೀಸ್ ತಿಳಿಸಿದೆ. ಅಪನಗದೀಕರಣ ಮತ್ತು ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ) ಜಾರಿ, ಜಿಡಿಪಿ ದರದ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಜಿಡಿಪಿ ಇಳಿಕೆಯಾಗಲಿದೆ. ಕಳೆದ ವರ್ಷ ಮಾರ್ಚ್ ಸಮಯದಲ್ಲಿ ಜಿಡಿಪಿ ದರ 7.1 % ಇತ್ತು. ಆದರೆ ಈ ಬಾರಿ 6.5ಕ್ಕೆ ಇಳಿಯಲಿದ್ದು, ಕಳೆದ ನಾಲ್ಕು ವರ್ಷಗಳಲ್ಲೇ ಇದು ಅತ್ಯಂತ ಕನಿಷ್ಠ ಮಟ್ಟ ತಲುಪಿದಂತಾಗುತ್ತದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲ ಭಾರತದ ತಲಾದಾಯ(ಜಿಡಿಐ) ಕೂಡ ಈ ಹಣಕಾಸು ವರ್ಷದಲ್ಲಿ(2017-18) 8.3 ಕ್ಕೆ ಇಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ.ಫೆಬ್ರವರಿ 1 ರಂದು ಕೇಂದ್ರ ಬಜೆಟ್ ಮಡಿಸಲಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರಿಗೆ ಇದೊಂದು ಸವಾಲಿನ ಸನ್ನಿವೇಶವಾಗಲಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!