By : Oneindia Kannada Video Team
Published : November 03, 2017, 12:02

ಫೆ.6 ರೊಳಗೆ ಮೊಬೈಲ್ ಫೋನ್ ಆಧಾರ್ ಜೋಡಣೆ ಕಡ್ಡಾಯ

ಫೆಬ್ರವರಿ 6ರೊಳಗೆ ಮೊಬೈಲ್ ಫೋನ್ ಸಿಮ್ ನಂಬರ್ ಹಾಗೂ ಆಧಾರ್ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ...ವಿವಿಧ ಸೇವೆಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ನಡೆದಿದೆ. ಗುರುವಾರ ನಡೆದ ವಿಚಾರಣೆ ವೇಳೆ,ಕೇಂದ್ರ ಸರ್ಕಾರದ ಪರ ವಕೀಲ ಜೊಹೆಬ್ ಹುಸೇನ್ ಅವರು 113 ಪುಟಗಳ ಹೊಸ ಅಫಿಡವಿಟ್ ಸಲ್ಲಿಸಿದ್ದು, ಮೊಬೈಲ್ ಫೋನ್ ಹಾಗೂ ಆಧಾರ್ ಜೋಡಣೆಗೆ ಫೆಬ್ರವರಿ 6 ಕೊನೆದಿನಾಂಕವಾಗಿದೆ ಎಂದಿದ್ದಾರೆ...ಆಧಾರ್ ಇಲ್ಲದ ಕಾರಣ ಪಡಿತರ ಸಿಗದೇ ಹಸಿವಿನಿಂದ ಯಾರೂ ಮೃತಪಟ್ಟಿಲ್ಲ ಎಂದೂ ಅಫಿಡವಿಟ್ ನಲ್ಲಿ ಹೇಳಲಾಗಿದೆ. ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆಗೆ ಮಾರ್ಚ್ 31 ಕೊನೆಯ ದಿನವಾಗಿದೆ. ಆಧಾರ್ ಮಾಹಿತಿಗಳು ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ..ಆಧಾರ್ ಕಾರ್ಡ್ ಹಾಗೂ ಮೊಬೈಲ್ ಫೋನ್ ಜೋಡಣೆ ಏಕೆ ಮಾಡಬೇಕು? ಈ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ನೀಡಿ ಎಂದು ಸೋಮವಾರದಂದು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ನೀಡಿದ ಸೂಚನೆ ಮೇರೆಗೆ ಕೇಂದ್ರ ಸರ್ಕಾರವು ಅಫಿಡವಿಟ್ ಸಲ್ಲಿಸಿದೆ...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!