By : Oneindia Kannada Video Team
Published : March 03, 2018, 06:06

ಮೇಘಾಲಯ : ಚುನಾವಣೋತ್ತರ ಮೈತ್ರಿಯ ಸುಳಿವು ನೀಡಿದ ಬಿಜೆಪಿ

ಇಂದು ಹೊರಬಿದ್ದ ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿ ತ್ರಿಪುರ, ನಾಗಾಲ್ಯಾಂಡ್ ಗಳಲ್ಲಿ ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಮರೆಯಾಗಿದೆ. ಮೇಘಾಲಯದಲ್ಲಿ ಒಂಚೂರು ಚಿಗುರಿಕೊಂದಿರುವ ಕಾಂಗ್ರೆಸ್ ಗೆ ಅಲ್ಲೂ ಆಘಾತ ನೀಡಲು ಬಿಜೆಪಿ ಮುಂದಾಗಿದೆ! ಫಲಿತಾಂಶದ ಹಿನ್ನೆಲೆಯಲ್ಲಿ ಮಾತನಾಡಿದ ಮೇಘಾಲಯ ಬಿಜೆಪಿ ಉಸ್ತುವಾರಿ, ನಳಿನ್ ಕೋಹ್ಲಿ, 'ಮೇಘಾಲಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರವನ್ನು ಅಧಿಕಾರಕ್ಕೆ ತರು ಪ್ರಯತ್ನ ನಡೆಯುತ್ತಿದೆ. ಇಲ್ಲಿನ ಎನ್ ಪಿಪಿ(ನ್ಯಾಶ್ನಲ್ ಪೀಪಲ್ಸ್ ಪಾರ್ಟಿ), ಯುಡಿಪಿ(ಯುನೈಟೆಡ್ ಡೆಮಾಕ್ರೆಟಿಕ್ ಪಾರ್ಟಿ) ಮತ್ತು ಬಿಜೆಪಿ, ಎನ್ ಡಿಎ ಮೈತ್ರಿಕೂಟದ ಇತರ ಪಕ್ಷಗಳು ಸೇರಿ ಸರ್ಕಾರ ರಚಿಸಲು ಕೈಜೋಡಿಸುವ ಯತ್ನ ನಡೆಯುತ್ತಿದೆ' ಎಂದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!