By: Oneindia Kannada Video Team
Published : November 20, 2017, 04:24

ಈ ಒಂದು ಪ್ರಶ್ನೆಯ ಸುಂದರವಾದ ಉತ್ತರದಿಂದಲೇ ಮಾನುಶಿ ವಿಶ್ವ ಸುಂದರಿ ಪಟ್ಟಗಿಟ್ಟಿದಳು

Subscribe to Oneindia Kannada

ಭಾರತದ ಮಾನುಶಿ ಚಿಲ್ಲರ್ ಚೀನಾದಲ್ಲಿ ಆಯೋಜಿಸಲಾದ ಮಿಸ್ ವರ್ಲ್ಡ್ ಪ್ರತಿಸ್ಪರ್ಧೆಯಲ್ಲಿ ವಿಶ್ವ ಸುಂದರಿಯ ಪಟ್ಟವನ್ನು ತನ್ನ ಮುಡಿಗೇರಿಸಿ ಕೊಂಡಿದ್ದಾಳೆ. ಈ ಸ್ಪರ್ಧೆಯ ಕೊನೆಯ ಹಂತದ ಐದು ಪ್ರತಿಸ್ಪರ್ಧೆಗಳಲ್ಲಿ ಮಾನುಶಿ ಚಿಲ್ಲರ್ ಳು ಕೊಟ್ಟ ಮನ ಮಿಡಿಯುವ ಉತ್ತರದಿಂದ ಉಳಿದ ನಾಲ್ವರನ್ನು ಸ್ಪರ್ಧೆಯಿಂದ ದೂರ ಮಾಡಿತು.ಕೊನೆಯ ಐದರ ಹಂತ ತಲುಪಿದ ಮಾನುಶಿಗೆ ಯಾವ ವ್ಯವಸಾಯ ಎಲ್ಲಕ್ಕೂ ಮಿಗಿಲಾಗಿ ಸಂಬಳ ಪಡೆಯಲು ಯೋಗ್ಯವಿದೆ ? ಎಂದು ಕೇಳಿದ ಪ್ರಶ್ನೆಗೆ ಮಾನುಶಿ ಕೊಟ್ಟ ಉತ್ತರ ತುಂಬಾನೇ ಪಾವರಫುಲ್ ಇತ್ತು. ಮಾನುಶಿ ಪ್ರಕಾರ ತಾಯಿಯು ಎಲ್ಲಕ್ಕಿಂತ ಮಿಗಿಲಾಗಿ ಸನ್ಮಾನದ ಹಕ್ಕುದಾರಳಾಗಿದ್ದಾಳೆ. ಒಂದು ವೇಳೆ ಸಂಬಳದ ವಿಷಯ ವಿಚಾರ ಮಾಡುವದಾದರೆ ನನ್ನ ಪ್ರಕಾರ ಅದು ಬರೀ ಹಣ ಅಲ್ಲ ಅದರ ಜೊತೆಗೆ ನೀವು ಪ್ರೀತಿ ಮತ್ತು ಸನ್ಮಾನವನ್ನು ಇನ್ನೊಬ್ಬರಿಗೆ ನೀವು ಕೊಡುತ್ತಿದ್ದೀರಿ. ಆದರಿಂದ ನನ್ನ ತಾಯಿಯೇ ನನಗೆ ನನ್ನ ಜೀವನದಲ್ಲಿ ದೊಡ್ಡ ಪ್ರೇರಣೆಯಾಗಿದ್ದಾಳೆ. ಎಲ್ಲ ತಾಯಿಂದಿರು ತಮ್ಮ ಮಕ್ಕಳಿಗಾಗಿ ಸಾಕಷ್ಟು ತ್ಯಾಗಗಳನ್ನು ಮಾಡುತ್ತಾರೆ. ಇದೆ ಕಾರಣಕ್ಕಾಗಿ ತಾಯಿಯು ಎಲ್ಲರಕ್ಕಿಂತ ಹೆಚ್ಚಿಗೆ ಸಂಬಳ ಪಡೆಯಲು ಯೋಗ್ಯ ಹಕ್ಕುದಾರಳಾಗಿದ್ದಾಳೆ.ಮಾನುಶಿ ಸಾನ್ಯ ದ ಏರಿನಾ ಪಟ್ಟಣದಲ್ಲಿ ಆಯೋಜಿಸಲಾದ ಈ ಸಮಾರೋಹದಲ್ಲಿ ಜಗತ್ತಿನ ಒಟ್ಟು 108 ಸುಂದರಿಯರು ಭಾಗವಹಿಸಿದ್ದರು. ಇವರನ್ನೆಲ್ಲ ಹಿಂದಿಕ್ಕಿ ಮಾನುಶಿ ವಿಶ್ವ ಸುಂದರಿ ಪಟ್ಟವನ್ನು ಪಡೆಯುವ ಸಾಧನೆಯನ್ನು ಮಾಡಿದ್ದಾರೆ. ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮಾನುಶಿ ಮೊದಲು ಮಿಸ್ ಇಂಡಿಯಾ ನಂತರ ಈಗ ಮಿಸ್ ವರ್ಲ್ಡ್ ಆಗಿ ರಾರಾಜಿಸಿದ್ದಾರೆ. ಇವರ ಜೀವನ ತುಂಬಾ ಡಿಸಿಪ್ಲೇನ್ ಇದೆ. ತನ್ನ ಡಾಯೆಟ್ ಫುಡ್, ಲ್ಯೂಕ್ಸ್, ಬಾಡಿ ಲಾಂಗ್ವೇಜ್ ಜೊತೆಗೆ ಮೆಡಿಕಲ್ ಅಭ್ಯಾಸ, ಕ್ಲಾಸುಗಳು ಹೀಗೆ ಇವೆಲ್ಲ ಮ್ಯಾನೇಜ್ ಮಾಡಿ ತಮ್ಮ ಗುರಿಯನ್ನು ತಲುಪಿದ್ದಾರೆ. ಈ ಪ್ರಶಸ್ತಿ 17 ವರ್ಷಗಳ ನಂತರ ಮಾನುಶಿಯ ರೂಪದಲ್ಲಿ ಮತ್ತೆ ಭಾರತಕ್ಕೆ ಒಲಿಯಿತು.ಈ ಸಾಧನೆಯಿಂದ ಮಾನುಶಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!