By: Oneindia Kannada Video Team
Published : December 08, 2017, 01:23

ಮಣಿ ಶಂಕರ್ ಅಯ್ಯರ್ ಮೋದಿ ಬಗ್ಗೆ ನೀಡಿದ ನೀಚ್ ಆದ್ಮಿ ಹೇಳಿಕೆ ಬಿಜೆಪಿಗೆ ಲಾಭ

Subscribe to Oneindia Kannada

ಗುಜರಾತ್ ಅಸೆಂಬ್ಲಿಗೆ ಮೊದಲ ಹಂತದ ಚುನಾವಣೆ ಶನಿವಾರ (ಡಿ 9) ನಡೆಯಲಿದೆ. ಮನೆಮನೆ ಪ್ರಚಾರಕ್ಕೆ ಗುರುವಾರ ತೆರೆಬಿದ್ದಿದೆ. ಆದರೇನಂತೆ, ಕಾಂಗ್ರೆಸ್ಸಿನ ಇಬ್ಬರು ಹಿರಿಯ ಮುಖಂಡರು ನೀಡಿದ ಹೇಳಿಕೆ, ಬಿಜೆಪಿಗೆ ಸಖತ್ ಮೈಲೇಜ್ ತಂದುಕೊಡುತ್ತಿದೆ ಎಂದೇ ಹೇಳಲಾಗುತ್ತಿದೆ.ಮೋದಿ ಒಬ್ಬ ಹಿಂದೂನೇ ಅಲ್ಲ ಎನ್ನುವ ಹೇಳಿಕೆ ನೀಡಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್, ಅಯೋಧ್ಯೆ ವಿಚಾರಣೆಯನ್ನು 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆ ನಂತರ ಮುಂದೂಡಬೇಕೆಂದು ಸುಪ್ರೀಂಕೋರ್ಟಿಗೆ ಮನವಿ ಮಾಡಿ ಸ್ವಪಕ್ಷೀಯರಿಂದಲೇ ಟೀಕೆಗೆ ಗುರಿಯಾಗಿದ್ದರು.ಇದಾದ ನಂತರ ಗುರುವಾರ ಕಾಂಗ್ರೆಸ್ಸಿನ ಹಿರಿಯ ಮುಖಂಡ, ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು 'ಚಾಯ್ ವಾಲಾ' ಎಂದು ಅಪಹಾಸ್ಯ ಮಾಡಿದ್ದ ಮಣಿಶಂಕರ್ ಅಯ್ಯರ್, ಮೋದಿಯೊಬ್ಬ 'ನೀಚ' ಎನ್ನುವ ಹೇಳಿಕೆಯನ್ನು ನೀಡಿ ವ್ಯಾಪಕ ಟೀಕೆಗೊಳಗಾಗಿದ್ದಾರೆ.ಗುಜರಾತ್ ಚುನಾವಣೆಯ ಹೊಸ್ತಿಲಲ್ಲಿ 'ನೀಚ' ಎನ್ನುವ ಹೇಳಿಕೆ, ಬಿಜೆಪಿಗೆ ಇನ್ನಷ್ಟು ಮತವನ್ನು ತಂದುಕೊಡುವ ಸಾಧ್ಯತೆಯಿಲ್ಲದಿಲ್ಲ. ಗುಜರಾತಿನ ಎರಡನೇ ಹಂತದ ಚುನಾವಣೆಯ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ, ಇದನ್ನು ಇಟ್ಟುಕೊಂಡು ಕಾಂಗ್ರೆಸ್ಸನ್ನು ಇನ್ನಷ್ಟು ರುಬ್ಬುವ ಸಾಧ್ಯತೆಯನ್ನು ಅರಿತ ಕಾಂಗ್ರೆಸ್, ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!