By : Oneindia Kannada Video Team
Published : December 11, 2017, 12:33

ಪಾಕ್ ರಾಜತಾಂತ್ರಿಕರ ಜೊತೆ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಸಭೆ

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ನೀಡಿದಾಗ, ಕಾಂಗ್ರೆಸ್ಸಿನಿಂದ ಅಮಾನತಾಗಿರುವ ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದ ಭೇಟಿಯಲ್ಲಿ ನಡೆದದ್ದು ಭಾರತ-ಪಾಕ್ ಸಂಬಂಧದ ವಿಚಾರವೋ, ಗುಜರಾತ್ ಚುನಾವಣೆಯನ್ನು ಕದಡುವ ವಿಚಾರವೋ? ಇದು ಖಾಸಗಿಯಾದ ಸಭೆಯಾಗಿದ್ದರೂ, ಕಾಂಗ್ರೆಸ್ ನ ಹಲವಾರು ನಾಯಕರು ಡಿಸೆಂಬರ್ 6ರಂದು ಮಣಿ ಶಂಕರ್ ಅಯ್ಯರ್ ಅವರ ನಿವಾಸದಲ್ಲಿ ನಡೆದಿರುವುದು ಮತ್ತು ಅಲ್ಲಿ ಸುಮಾರು ಮೂರು ಗಂಟೆಗಳ ಕಾಲ ಚರ್ಚೆ ನಡೆದಿರುವುದು ಹಲವರು ಹುಬ್ಬೇರಿಸುವಂತೆ ಮಾಡಿದೆ.ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್ ನಲ್ಲಿ ಮಾಡಿದ ಚುನಾವಣಾ ಪ್ರಚಾರಸಭೆಯಲ್ಲಿ, ಈ ಕುರಿತು ಪ್ರಸ್ತಾಪಿಸಿದ್ದರು. ಪಾಕಿಸ್ತಾನ ಅನವಶ್ಯಕವಾಗಿ ಗುಜರಾತ್ ಚುನಾವಣೆಯಲ್ಲಿ ಮೂಗು ತೂರಿಸುತ್ತಿದೆ. ಈ ಸಭೆಯ ನಂತರವೇ ಗುಜರಾತಿನ ಹಿಂದುಳಿದ ಸಮುದಾಯವನ್ನು ಮಣಿ ಶಂಕರ್ ಅಯ್ಯರ್ ಅವಮಾನಿಸಿದ್ದಾರೆ ಎಂದು ಮೋದಿ ಆರೋಪಿಸಿದ್ದರು.ಮಣಿ ಶಂಕರ್ ಅಯ್ಯರ್ ಅವರ ಮನೆಯಲ್ಲಿ ಈ ವಿವಾದಾತ್ಮಕ ಸಭೆ ನಡೆದ ನಂತರವೇ, ಅಯ್ಯರ್ ಅವರು ನರೇಂದ್ರ ಮೋದಿಯನ್ನು 'ನೀಚ' ಎಂದು ಕಟಕಿಯಾಡಿದ್ದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!