By: Oneindia Kannada Video Team
Published : January 04, 2018, 12:53

ದೀಪಕ್ ರಾವ್ ಶವಯಾತ್ರೆಗೆ ಬಿಗಿಪಟ್ಟು , ಸ್ಥಳದಲ್ಲಿ ಉದ್ವಿಗ್ನ ವಾತಾವರಣ

Subscribe to Oneindia Kannada

ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮೃತ ದಿಪಕ್ ರಾವ್ ಅವರ ಶವಯಾತ್ರೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು. ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಈ ಮುಂಚೆಯೂ ಮೆರವಣಿಗೆಗಳು ನಡೆದ ಸಂದರ್ಭದಲ್ಲಿ ಘರ್ಷಣೆಗಳಾಗಿರುವ ಉದಾಹರಣೆಗಳು ಜಿಲ್ಲೆಯಲ್ಲಿ ಇವೆ ಹಾಗಾಗಿ ಪೊಲೀಸರು ಶವ ಯಾತ್ರೆಗೆ ಅನುಮತಿ ನಿರಾಕರಿಸುತ್ತಿದ್ದಾರೆ ಎಂದರು.ಮಾಧ್ಯಮದ ಪೋನ್ ಇನ್ ನಲ್ಲಿ ಎದುರುಬದುರಾದ ಸಚಿವ ರಮಾನಾಥ ರೈ ಹಾಗೂ ಶೋಭಾ ಕರಂದ್ಲಾಜೆ ಮಧ್ಯೆ ಕಾವೇರಿದ ಆರೋಪ ಪ್ರತ್ಯಾರೋಪ ನಡೆಯಿತು, ತೀರ್ವ ಜಟಾಪಟಿ ನಡೆಸಿದ ಇಬ್ಬರು ಮುಖಂಡರು ಪರಸ್ಪರ ಪಕ್ಷಗಳನ್ನು ಮೂದಲಿಸಿಕೊಂಡರು.ಜಿಹಾದಿ ಮನಸ್ಥಿತಿಯ ಸಂಘಟನೆಗಳಾದ ಎಸ್‌ಡಿಪಿಐ, ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಿ ಎಂಬ ಶೋಭಾ ಕರಂದ್ಲಾಜೆ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗಲೂ ಪಿಎಫ್ಐ, ಎಸ್‌ಡಿಪಿಐ ಸಂಘಟನೆಗಳು ಅಸ್ತಿತ್ವದಲ್ಲಿತ್ತು, ಆಗ ಏಕೆ ಅವರು ನಿಷೇಧಿಸಲಿಲ್ಲ, ಆ ಸಂಘಟನೆಗಳು ಕರ್ನಾಟದಲ್ಲಿ ಮಾತ್ರವಲ್ಲ ದೇಶದ ಎಲ್ಲೆಡೆ ಇವೆ ಮೋದಿ ಅವರೇ ಸಂಘಟನೆಗಳ ಮೇಲೆ ನಿಷೇಧ ಹೇರಲಿ ಎಂದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!