By: Oneindia Kannada Video Team
Published : November 28, 2017, 03:09

ಬಾಲಿಯ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ

Subscribe to Oneindia Kannada

ಇಂಡೋನೇಷ್ಯಾದ ದ್ವೀಪ ಬಾಲಿಗೆ ಪ್ರವಾಸ ಹೋಗುವ ಇರಾದೆಯಲ್ಲಿದ್ದರೆ ಈಗಲೇ ಎಚ್ಚೆತ್ತುಕೊಳ್ಳಿ. ಅಲ್ಲಿನ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ ಹೆಚ್ಚಾಗಿದ್ದು, ಬೂದಿಯುಗುಳುತ್ತಿದೆ. ಪರಿಸ್ಥಿತಿ ತೀರಾ ಗಂಭೀರವಾಗಿರುವುದರಿಂದ ಅಲ್ಲಿನ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಸಾವಿರಾರು ಪ್ರವಾಸಿಗರನ್ನು ಅಲ್ಲಿಂದ ಸ್ಥಳಾಂತರ ಮಾಡಲಾಗುತ್ತಿದೆ.ಬಾಲಿ ದ್ವೀಪ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಹೆಸರುವಾಸಿ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಕಳೆದ ಸೆಪ್ಟೆಂಬರ್ ನಿಂದ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ ಪ್ರಮಾಣ ಹೆಚ್ಚಾಗಿದೆ. ನವೆಂಬರ್ 21ರಿಂದ ಪರ್ವತದಿಂದ ಹೊಗೆ ಹಾಗೂ ಬೂದಿ ಕಾಣಿಸಿಕೊಳ್ಳುವುದು ತುಂಬ ಹೆಚ್ಚಾಗಿದೆ. ಆಕಾಶದೆತ್ತರಕ್ಕೆ ಹೊಗೆ ಕಾಣಿಸಿಕೊಂಡಿದ್ದು, ಇಂಡೋನೇಷ್ಯಾ ಸರಕಾರ ಎಚ್ಚರಿಕೆಯನ್ನು ನೀಡಿದೆ. 1963ರಲ್ಲಿ ಪರ್ವತದಲ್ಲಿ ಜ್ವಾಲಾಮುಖಿ ಕಾಣಿಸಿಕೊಂಡು, ದ್ವೀಪದಲ್ಲಿ 1600 ಮಂದಿ ಮೃತಪಟ್ಟಿದ್ದರು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಪರ್ವತದ ಸಮೀಪ ವಾಸವಿರುವವರನ್ನು ಸಮರೋಪಾದಿಯಲ್ಲಿ ಸ್ಥಳಾಂತರ ಮಾಡಲಾಗುತ್ತಿದೆ. ಬಾಲಿಯ ಅಗಂಗ್ ಪರ್ವತದಲ್ಲಿ ಜ್ವಾಲಾಮುಖಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!