By: Oneindia Kannada Video Team
Published : February 02, 2018, 05:33

ಯಜ್ಞ, ಪಕ್ಷಕ್ಕಾಗಿ ಅಲ್ಲ ಗೋವಿಗಾಗಿ: ಸಿದ್ದಾರ್ಥ್ ಗೋಯೆಂಕಾ

Subscribe to Oneindia Kannada

ಬೆಂಗಳೂರು, ಫೆಬ್ರವರಿ 02: ಗೋ ಹತ್ಯೆ ತಡೆ ಹಾಗೂ ಗೋವಿನಿಂದಾಗುವ ವಿವಿಧ ಉಪಯೋಗಗಳ ಕುರಿತು ಜಾಗೃತಿ ಮೂಡಿಸಲು ಬಿಜೆಪಿಯ ಗೋ ಸಂರಕ್ಷಣಾ ಪ್ರಕಾಷ್ಠದ ವತಿಯಿಂದ ಜೆ.ಪಿ.ನಗರದ ಪುಟ್ಟೇನಹಳ್ಳಿಯಸತ್ಯ ಗಣಪತಿ ದೇವಾಲಯ ಮೈದಾನದಲ್ಲಿ 'ಗೋ ಸಂರಕ್ಷಣಾ ಅಷ್ಟಯಾಮ ಮಹಾಯಜ್ಞ' ಆಯೋಜಿಸಲಾಗಿದೆ. 24 ಗಂಟೆ ಸತತವಾಗಿ ಯಜ್ಞ ನಡೆಯಲಿದ್ದು ನಾಳೆ ಬಿಜೆಪಿಯ ರಾಜ್ಯನಾಯಕರುಗಳು ಯಜ್ಞದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ಪುರೋಹಿತರ ತಂಡ ಯಜ್ಞವನ್ನು ನಡೆಸಿಕೊಡುತಿದ್ದು, ಹೋಮ ಈಗಾಗಲೇ ಪ್ರಾರಂಭವಾಗಿದೆ. ಅದರ ಜೊತೆಗೆ ಸತ್ಯನಾರಾಯಣ ಸ್ವಾಮಿ ಪೂಜೆಯನ್ನೂ ಮಾಡಲಾಗುತ್ತಿದೆ. ಜೊತೆಗೆ ಭಜನೆ ಸಹ ಆಯೋಜಿಸಲಾಗಿದೆ. ಯಜ್ಞದ ಪ್ರಮುಖ ಆಯೋಜಕ ಬಿಜೆಪಿ ಗೋ ಸಂರಕ್ಷಣಾ ಪ್ರಕಾಷ್ಠದ ಅಧ್ಯಕ್ಷ ಸಿದ್ದಾರ್ಥ್‌ ಗೋಯೆಂಕಾ ಮಾತನಾಡಿ 'ಗೋವು ನಮ್ಮ ಸಂಸ್ಕೃತಿಯ ಪ್ರಮುಖ ಭಾಗ. ಅದನ್ನು ಉಳಿಸುವುದು ನಮ್ಮ ಹೊಣೆ, ಗೋವಿನ ಜೀವದ ಮೇಲೆ ಆಗುತ್ತಿರುವ ನಿರಂತರ ದಬ್ಬಾಳಿಕೆ ವಿರುದ್ಧ ಈ ಮಹಾಯಜ್ಞವನ್ನು ಆಯೋಜಿಸಲಾಗಿದೆ ಎಂದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!