By: Oneindia Kannada Video Team
Published : December 05, 2017, 09:31

ಓಖಿ ಅಬ್ಬರವೀಗ ಮುಂಬೈನತ್ತ: ಶಾಲೆಕಾಲೇಜುಗಳಿಗೆ ರಜೆ

Subscribe to Oneindia Kannada

ಮುಂಬೈ, ಡಿಸೆಂಬರ್ 05: ಓಖಿ ಚಂಡಮಾರುತದಿಂದಾಗಿ ಮುಂಬೈಯಲ್ಲೂ ಭಾರೀ ಮಳೆ ಆರಂಭವಾಗಿದ್ದು, ಮುನ್ನೆಚ್ಚರಿಕೆಗಾಗಿ ಇಂದು(ಡಿ.05) ಮುಂಬೈಯ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ತನ್ನ ಅಬ್ಬರ ತೋರಿಸಿದ ನಂತರ, ಓಖಿ ಇದೀಗ ವಾಣಿಜ್ಯನಗರಿ ಮುಂಬೈಯನ್ನು ತಲುಪಿದೆ.ಯಾವುದೇ ಅಹಿತಕರ ಘಟನೆ ನಡೆಯಬಾರದೆಂಬ ಕಾರಣಕ್ಕೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳು ಸೇರಿದಂತೆ, ಮುಂಬೈ ನಗರದಲ್ಲೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಈ ಕ್ರೂರ ಚಂಡಮಾರುತಕ್ಕೆ ಇದುವರೆಗೂ 25 ಜನ ಮೃತರಾಗಿದ್ದಾರೆ.ಯಾವುದೇ ರೀತಿಯ ಅಹಿತಕರ ಘಟನೆ ಮುಂದೆ ಸಂಭವಿಸಲಿಲ್ಲ ಅನ್ದರೆ ಅಷ್ಟೇ ಸಾಕು ,ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಹಲವೆಡೆ ಗುರುವಾರ ಹಾಗೂಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಇತ್ತು.ಈಗಾಗಲೇ ತಮಿಳುನಾಡಿನ ಟುಟಿಕಾರನ್, ತಿರುನೆಲ್ವೇಲಿ, ಕನ್ಯಾಕುಮಾರಿ, ವಿರುದುನಗರ್ ಗಳಲ್ಲಿ ಭಾರಿ ಮಳೆಯಾಗಿದ್ದು . ಮಳೆ ಪೀಡಿತ ಈ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!