By : Oneindia Kannada Video Team
Published : December 27, 2017, 12:49

ಮಹದಾಯಿ ವಿವಾದ : ಯಾವುದೇ ರಾಜಿಯಿಲ್ಲ ಎಂದ ಗೋವಾ ಸಚಿವ ವಿನೋದ್ ಪಾಲೇಕರ್

ಮಹಾದಾಯಿ ನದಿ ನೀರು ಹಂಚಿಕೆ ವಿವಾದ ಈಗ ಕರ್ನಾಟಕ ಹಾಗೂ ಗೋವಾ ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಕೆಸರೆರೆಚಾಟಕ್ಕೆ ನಾಂದಿ ಹಾಡಿದೆ. ಗೋವಾ ಸಿಎಂ ಮನೋಹರ್ ಅವರು ತಮ್ಮ ಸರ್ಕಾರ ಉಳಿಸಿಕೊಳ್ಳುವ ಸರ್ಕಸ್ ನಡೆಸಿದ್ದಾರೆ.ಉತ್ತರ ಕರ್ನಾಟಕ ಬಂದ್ ಆಗಿದೆ. ರೈತ್ರು ಬೆಂಗಳೂರಿನಲ್ಲಿ ಹೋರಾಟ ಮುಂದುವರೆಸಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಮುಗಿಯುವ ತನಕ ಮಹಾದಾಯಿ ಬಗ್ಗೆ ಮಾತುಕತೆ ಬೇಡ ಎಂದು ಆಜ್ಞೆ ಹೊರಡಿಸಿದೆ.ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವೆ ಮಹಾದಾಯಿ 7.56 ಟಿಎಂಸಿ ನೀರು ಹಂಚಿಕೆ ವಿವಾದ ಸದ್ಯ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಯಲ್ಲಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಟ್ರಿಬ್ಯುನಲ್ ಸೂಚಿಸಿದೆ.ಗೋವಾ ಹಾಗೂ ಕರ್ನಾಟಕ ಸರ್ಕಾರ ಈ ಬಗ್ಗೆ ಉತ್ಸುಕರಾಗಿದ್ದರೂ, ಮಹಾರಾಷ್ಟ್ರ ಸಿದ್ಧವಿಲ್ಲ.ಮಹಾದಾಯಿ ನಮ್ಮ ತಾಯಿ, ಈ ವಿಷಯದಲ್ಲಿ ಯಾವುದೇ ರೀತಿ ರಾಜಿಗೆ ನಾವು ಸಿದ್ಧರಿಲ್ಲ. ನಮಗೆ ಮಹಾದಾಯಿ ಮುಖ್ಯ ಸಂಪನ್ಮೂಲವಾಗಿದೆ. ನಮ್ಮ ಜೀವಜಲ, ಇದನ್ನು ಕಳೆದುಕೊಂಡರೆ ಕೇವಲ ಮೀನುಗಾರಿಕೆ, ಆರ್ಥಿಕ ಅಸಮತೋಲನವಷ್ಟೇ ಅಲ್ಲ, ನಮ್ಮ ಬದುಕು ಅತಂತ್ರವಾಗುತ್ತದೆ. ಮನೋಹರ್ ಅವರು ಮಾತುಕತೆ ನಡೆಸಲಿ, ಆದರೆ, ನೀರು ಹಂಚಿಕೆ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದ್ದು, ಒಂದು ಹನಿ ನೀರು ಕೊಡುವುದಿಲ್ಲ ಎಂದರು..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!