By : Oneindia Kannada Video Team
Published : January 24, 2018, 05:21

ಮಹದಾಯಿ ವಿವಾದ : ಜನವರಿ 25 ಕರ್ನಾಟಕ ಬಂಧ್ ಏನಿರುತ್ತೆ ಏನಿರಲ್ಲ?

ಬಯಲು ಸೀಮೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ವಾಟಾಳ್ ನಾಗರಾಜ್ ಅವರು ಮತ್ತೊಮ್ಮೆ ಬಂದ್ ಗೆ ಕರೆ ನೀಡಿದ್ದಾರೆ.

ಜೂನ್ 12ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದ ವಾಟಾಳ್ ಅವರು ಈಗ ಮತ್ತೊಮ್ಮೆ ಮಹದಾಯಿ ನದಿ ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ಮೋದಿ ಮುಂದಾಗಬೇಕು ಎಂದು ಆಗ್ರಹಿಸಿ ಜನವರಿ 25ರಂದು ಬಂದ್ ಗೆ ಕರೆ ನೀಡಿದ್ದಾರೆ.

ಈ ಬಂದ್ ಗೆ ಅನೇಕ ಸಂಘಟನೆಗಳು ನೈತಿಕ ಬೆಂಬಲ ಮಾತ್ರ ನೀಡಿವೆ. ಬಂದ್ ದಿನ ಯಾವ ಸೇವೆ ಇರುತ್ತದೆ ಯಾವ ಸೇವೆ ಇರಲ್ಲ, ಬಸ್ ಸಂಚಾರ, ಶಾಲೆ-ಕಾಲೇಜು, ಕಚೇರಿ ಬಗ್ಗೆ ವಿವರ ಇಲ್ಲಿದೆ...

ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ಬಂದ್ ಕಾಂಗ್ರೆಸ್ ಪ್ರಾಯೋಜಿತ ಎಂದು ಬಿಜೆಪಿ ಆರೋಪಿಸಿದೆ. ಈ ಹಿಂದೆ ಬಂದ್ ಮಾಡಿದ್ದಾಗ ರಾಹುಲ್ ಗಾಂಧಿ ಕರ್ನಾಟಕಕ್ಕೆ ಆಗಮಿಸಿದ್ದರು. ಈಗ ಅಮಿತ್ ಶಾ ಅವರು ನಾಳೆ ದಿನ ಸುತ್ತೂರು ಮಠಕ್ಕೆ ಬರುತ್ತಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!