By : Oneindia Kannada Video Team
Published : December 27, 2017, 03:42

ಮಹದಾಯಿ ವಿವಾದ : ಸಿದ್ದರಾಮಯ್ಯ ಮನೆಯತ್ತ ಹೊರಟ ರೈತರ ಪ್ರತಿಭಟನೆ

ಮಹದಾಯಿ ನದಿ ನೀರು ಇತ್ಯರ್ಥಕ್ಕಾಗಿ ಅತ್ತ ಉತ್ತರ ಕರ್ನಾಟಕ ಹೊತ್ತಿ ಉರಿಯುತ್ತಿದ್ದರೆ, ಇತ್ತ ಬೆಂಗಳೂರಿನಲ್ಲಿ ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಅವರ ನೇತೃತ್ವದ ರೈತರು ಬಿಜೆಪಿ ಕಚೇರಿಯಿಂದ ರಾಜಭವನ,ಚುನಾವಣಾ ಆಯೋಗ ಕಚೇರಿ, ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸದತ್ತ ಪಾದಯಾತ್ರೆ ಹೊರಟಿದ್ದಾರೆ.ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಹದಾಯಿ ರೈತರ ಜಾಥಾ ಮೊದಲು ಮಲ್ಲೇಶ್ವರಂನಿಂದ ಚಾಲುಕ್ಯ ಸರ್ಕಲ್ ಮೂಲಕ ರಾಜಭವನಕ್ಕೆ ಹೊರಟಿದೆ. ಜಾಥಾದಲ್ಲಿ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ.ಜಾತಾದಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತದೆ ಎಂದು ವಾಹನದ ಮೂಲಕ ತೆರಳುವಂತೆ ರೈತರಿಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು. ಆದರೆ, ಇದಕ್ಕೆ ಕ್ಯಾರೆ ಎನ್ನದ ರೈತರು ಪಾದಯಾತ್ರೆ ಮೂಲಕ ರಾಜಭವನದತ್ತ ಹೆಜ್ಜೆ ಹಾಕಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!