By : Oneindia Kannada Video Team
Published : January 30, 2018, 01:01

ಜನವರಿ 31 ಖಂಡಗ್ರಾಸ ಚಂದ್ರಗ್ರಹಣ : ಹೆಚ್ಚು ನಿದ್ದೆ ಮಾಡೋರಿಗೆ ಅಪಾಯ

ಜನವರಿ 31ಕ್ಕೆ ಖಗ್ರಾಸ ಚಂದ್ರಗ್ರಹಣ. ಆಶ್ಲೇಷಾ ನಕ್ಷತ್ರದಲ್ಲಿ ಚಂದ್ರನಿಗೆ ರಾಹು ಗ್ರಹಣ. ಅಂದರೆ ಚಂದ್ರನೇನೂ ಗ್ರಹಣ ಬಾಧಿತನಾಗುವುದಿಲ್ಲ ಅಥವಾ ಮಲಿನವೂ ಆಗುವುದಿಲ್ಲ. ಆದರೆ ಅಷ್ಟು ಹೊತ್ತು ಚಂದ್ರ ರಶ್ಮಿಗಳು ಭೂಮಿಗೆ ವಂಚಿತವಾಗುತ್ತದೆ.

ಚಂದ್ರ ಅಂದರೆ ಮನೋಕಾರಕ. ಆದ್ದರಿಂದ ಮನುಷ್ಯನ ಮೇಲೆ ದುಷ್ಪರಿಣಾಮ ಬೀರುತ್ತದೆ. ಅಂದರೆ existing nature ಇರುವವರಿಗೆ ಇನ್ನಷ್ಟು ಆ ಪ್ರಕೃತಿಯು ಉದ್ದೀಪನಗೊಳ್ಳುತ್ತದೆ. ಹೆಂಡ ಕುಡಿಯದೆಯೇ ತೂರಾಡುವವನು ಹೆಂಡ ಕುಡಿದರೆ ಹೇಗಾದೀತು? ಅತಿಯಾಗಿ ನಿದ್ರಿಸುವ ಜಾಯಮಾನದವರಿಗೆ, ಸಭೆ ಸಮಾರಂಭಗಳೆನ್ನದೆ ವೇದಿಕೆಯಲ್ಲೇ ತೂಕಡಿಸುವ ಮನುಷ್ಯರಿಗೆ ಅಪಾಯವಿದೆ.

ಅವರ ನಿದ್ರಾ ಪ್ರವೃತ್ತಿಯನ್ನು ಇನ್ನಷ್ಟು ಉದ್ದೀಪನಗೊಳಿಸುತ್ತದೆ. ಅದರಲ್ಲೂ ಆಶ್ಲೇಷಾ ನಕ್ಷತ್ರ ಇರುವ ಇಂತಹ ನಿದ್ರಾಸಕ್ತರು, ದಶಾಧಿಪ ಆಶ್ಲೇಷಾ ನಕ್ಷತ್ರದಲ್ಲಿದ್ದರೂ ಇದು ದುಷ್ಪರಿಣಾಮ ಬೀರಬಹುದು. ಅದಕ್ಕಾಗಿ ಆ ದಿನ ಮಧ್ಯಾಹ್ನದ ನಂತರ ಉಪವಾಸವಿದ್ದು, ಘಟ ಶುದ್ಧಿಯಿಂದ ಇದ್ದರೆ ತುಂಬಾ ಕ್ಷೇಮವಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!