By : Oneindia Kannada Video Team
Published : January 30, 2018, 01:37

ಜನವರಿ 31 ಖಂಡಗ್ರಾಸ ಚಂದ್ರಗ್ರಹಣ : ಧಾರ್ಮಿಕ ಆಚರಣೆಗಳ ಬಗ್ಗೆ ಮಾಹಿತಿ

ಜನವರಿ 31ಕ್ಕೆ ಖಂಡಗ್ರಾಸ ಚಂದ್ರಗ್ರಹಣ ಇದೆ. ಆ ದಿನದ ಧಾರ್ಮಿಕ ಆಚರಣೆ ಮತ್ತಿತರ ವಿಚಾರದ ಬಗ್ಗೆ ಹಲವರು ಪ್ರಶ್ನೆಗಳನ್ನು ಕೇಳುತ್ತಾರೆ. ಆ ದಿನ ಹೇಗಿರಬೇಕು ಎಂಬುದರ ವಿವರವನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಗ್ರಹಣ ಅಂದರೆ ಅದೊಂದು ಕೌತುಕ, ಪ್ರಕೃತಿಯಲ್ಲಿನ ಸಹಜ ಕ್ರಿಯೆ ಅನ್ನುವವರ ನಂಬಿಕೆ ಅವರಿಗೆ. ಆಚರಣೆ ಮಾಡುವ ಆಸ್ತಿಕರ ಸಲುವಾಗಿಯೇ ಈ ವಿಡಿಯೋ.

ಗ್ರಹಣದ ಸಮಯದಲ್ಲಿ ನಿಮ್ಮ ಹೊಟ್ಟೆ ಖಾಲಿಯಿರಬೇಕು. ಆಗ ಆಹಾರ ಇದ್ದರೆ ನಿಮ್ಮ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದ್ದರಿಂದ ಬೆಳಗ್ಗೆ ಆಹಾರ ಸೇವನೆ ಮಾಡಿ. ಆ ನಂತರ ಉಪವಾಸ ಇರುವುದು ಉತ್ತಮ. ಗ್ರಹಣ ಸಮಯದಲ್ಲಿ ಮಲ- ಮೂತ್ರ ವಿಸರ್ಜನೆ ಮಾಡಬಾರದು. ನಿದ್ದೆ ಮಾಡಬಾರದು.

ಗ್ರಹಣ ಅಂದರೆ ಪರ್ವಕಾಲ. ಆದ್ದರಿಂದ ಧ್ಯಾನ, ಜಪ, ದಾನ, ಪೂಜೆಯಲ್ಲಿ ತೊಡಗಿಸಿಕೊಳ್ಳಬೇಕು. ಗ್ರಹಣ ಕಾಲದಲ್ಲಿ ಮಾಡಿದ ಇಂಥ ಕಾರ್ಯಗಳಿಗೆ ಅತಿ ಹೆಚ್ಚಿನ ಫಲ.

ಗ್ರಹಣ ಸ್ಪರ್ಶ ಹಾಗೂ ಮೋಕ್ಷ ಕಾಲದಲ್ಲಿ ಸ್ನಾನ ಮಾಡಬೇಕು. ಅದೂ ಉಟ್ಟ ಬಟ್ಟೆಯಲ್ಲೇ ಸ್ನಾನ ಮಾಡಬೇಕು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!