By : Oneindia Kannada Video Team
Published : November 18, 2017, 12:34

ಕಾರ್ತೀಕ ಅಮಾವಾಸ್ಯೆಯ ದಿನ ಶನೈಶ್ಚರ ಪೂಜೆ ಬಹಳ ವಿಶೇಷ

ಕಾರ್ತೀಕ ಅಮಾವಾಸ್ಯೆ ಶನೈಶ್ಚರ ಪೂಜೆ ವಿಪರೀತ ವಿಶೇಷ, ಸಿಕ್ಕಾಪಟ್ಟೆ ಫಲ. ಶನೈಶ್ಚರ ಆರಾಧನೆ ಬಹಳ ಮಹತ್ವದಿಂದ ಕೂಡಿದ ವಿಚಾರ. ಆದುದರಿಂದ ಆರಾಧನೆ ಮಾಡುವಾಗ ಸೂಕ್ತ ಹಾಗೂ ಹೆಚ್ಚಿನ ವಿಶೇಷ ಫಲ ನೀಡುವ ದಿನಗಳನ್ನು ನೋಡಿ ಮಾಡುವುದು ಉತ್ತಮ. ಹೀಗಿರುವಾಗ ಅಂಥ ಉತ್ತಮ ಹಾಗೂ ಶ್ರೇಷ್ಠ ದಿನಗಳಲ್ಲಿ ಕಾರ್ತೀಕ ಮಾಸದ ಅಮಾವಾಸ್ಯೆ ಅಂದರೆ ನಾಳೆಯ (ನವೆಂಬರ್ 18, ಶನಿವಾರ) ದಿನ ಸಹ ಒಂದು. ಕಾರ್ತೀಕ ಮಾಸ ಅಂದರೆ ಅದು ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುವ ಮಾಸ. ಆದುದರಿಂದ ಇಲ್ಲಿ ದೀಪ ಹಚ್ಚುವ ಪದ್ಧತಿಗೆ ವಿಶೇಷ ಮಹತ್ವ ಇದೆ. ಈ ಕಾರ್ತೀಕ ಅಮಾವಾಸ್ಯೆಯಂದು ಮಾಡುವ ಶನಿ ದೇವರ ಆರಾಧನೆಯಲ್ಲಿ ಸಹ ದೀಪಕ್ಕೆ ವಿಶೇಷವಾದ ಪಾತ್ರ ಇದೆ.ಆದ್ದರಿಂದ ಹತ್ತಿರದ ಶನೈಶ್ಚರ ದೇಗುಲಕ್ಕೆ ಹೋಗಿ ಅಲ್ಲಿ ಸ್ವಾಮಿಗೆ ಪರಿಶುದ್ಧವಾದ (ಅಡುಗೆ ದರ್ಜೆ) ಎಳ್ಳೆಣ್ಣೆಯಲ್ಲಿ ಅಭಿಷೇಕ ಮಾಡಿಸಿ ಹಾಗೂ ಬಿಲ್ವಪತ್ರೆಯಲ್ಲಿ ಶನಿಯ ಅಷ್ಟೋತ್ತರ ಪಠಿಸುತ್ತಾ ಅರ್ಚನೆ ಮಾಡಿಸಬೇಕು. ಆ ನಂತರ ಶನೈಶ್ಚರನಿಗೆ ಕರಿ ಎಳ್ಳು- ಬೆಲ್ಲ ಮಿಶ್ರಣ ಮಾಡಿ, ತಯಾರು ಮಾಡಿದ ಭಕ್ಷ್ಯ ನೈವೇದ್ಯ ಮಾಡಿಸಬೇಕು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!