By : Oneindia Kannada Video Team
Published : January 09, 2018, 11:35

ಮೂಡಿಗೆರೆ ಯುವತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಎಸ್ ಪಿ ಅಣ್ಣಾಮಲೈ ಹೇಳಿಕೆ

ಹಿಂದೂ ಸಂಘಟನೆ ಕಾರ್ಯಕರ್ತರ ನಿರಂತರ ದೌರ್ಜನ್ಯ, ಬೆದರಿಕೆಗೆ ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಯುವತಿಯೊಬ್ಬಳು ಪ್ರಾಣ ಬಿಟ್ಟಿದ್ದಾಳೆ. ಪ್ರಕರಣ ಸಂಬಂಧ ಮೂಡಿಗೆರೆ ನಗರ ಘಟಕದ ಬಿಜೆಪಿಯ ಯುವಮೋರ್ಚಾ ಅಧ್ಯಕ್ಷನನ್ನು ಬಂಧಿಸಲಾಗಿದೆ. ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಆಕೆ 'ನಾನು ಮುಸ್ಲಿಮರನ್ನು ಪ್ರೀತಿಸುತ್ತೇನೆ' ಎಂದು ಹೇಳಿಕೊಂಡಿದ್ದಳು. ಆಕೆ ಹಿಂದೂ ಸಂಘಟನೆ ಕಾರ್ಯಕರ್ತರ ಕಿರುಕುಳ ತಾಳಲಾರದೆ ನೇಣಿಗೆ ಕೊರಳೊಡ್ಡಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಆಕೆಯ ಮನೆಗೆ ಐವರು ಹಿಂದೂ ಸಂಘಟನೆ ಕಾರ್ಯಕರ್ತರು ಭೇಟಿ ನೀಡಿ ಆಕೆಗೆ ಮತ್ತು ಆಕೆಯ ತಾಯಿಗೆ ಬೆದರಿಕೆ ಹಾಕಿದ್ದರು. 'ಮುಸ್ಲಿಮರ ಜತೆ ಸಹಬಾಳ್ವೆ'ಯಿಂದ ಇರುವುದನ್ನು ಪ್ರಶ್ನಸಿದ್ದರು. ಇದಾಗಿ ಮರುದಿನ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಇದಲ್ಲದೆ ಧನ್ಯಶ್ರೀಯ ಖಾಸಗಿ ಸಂಭಾಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯೂ ಆಗಿದ್ದು ಆಕೆಯ ಆತ್ಮಹತ್ಯೆಗೆ ಮತ್ತೊಂದು ಕಾರಣ ಎನ್ನಲಾಗಿದೆ. ಪ್ರಕರಣದ ಬಗ್ಗೆ ಎಸ್ ಪಿ ಅಣ್ಣಾಮಲೈ ಹೇಳಿಕೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!