By: Oneindia Kannada Video Team
Published : December 06, 2017, 04:15

ಈ ಸೀರೀಸ್ ನಲ್ಲಿ ಕೊಹ್ಲಿ ಮುರಿದ ದಾಖಲೆಗಳ ಪಟ್ಟಿ

Subscribe to Oneindia Kannada

ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಶತಕ, ದ್ವಿಶತಕ ಗಳನ್ನು ಸಿಡಿಸುತ್ತಿದ್ದಂತೆ ಅಂಕಿ ಅಂಶ ಕಲೆ ಹಾಕುವವರಿಗೆ ಹಬ್ಬ ಶುರುವಾಗುತ್ತದೆ. ಕ್ರಿಕೆಟ್ ದಿಗ್ಗಜರ ದಾಖಲೆಗಳನ್ನು ಮುರಿದು ಕೊಹ್ಲಿ ಮುನ್ನುಗ್ಗುತ್ತಿದ್ದಾರೆ. ನಾಯಕನಾಗಿ ಅತಿ ಹೆಚ್ಚು ದ್ವಿಶತಕ ಸಿಡಿಸಿದ ದಾಖಲೆಯನ್ನು ಕೊಹ್ಲಿ ಅವರು ಮುರಿದಿದ್ದಾರೆ. ಅಂತಿಮವಾಗಿ 213ರನ್ ಗಳಿಸಿದ್ದ ಕೊಹ್ಲಿ ಅವರು ನಾಯಕನಾಗಿ ಬ್ರಿಯಾನ್‌ ಲಾರಾ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆ ಸಮಕ್ಕೆ ಕೊಹ್ಲಿ ನಿಂತಿದ್ದರು. ವೆಸ್ಟ್‌ ಇಂಡೀಸ್‌ ತಂಡದ ನಾಯಕರಾಗಿ ಬ್ರಿಯಾನ್ ಲಾರಾ ಅವರು ಐದು ಬಾರಿ ಇನ್ನೂರಕ್ಕೂ ಅಧಿಕ ರನ್‌ಗಳನ್ನು ಹೊಡೆದಿದ್ದರು. ಈಗ ಕೊಹ್ಲಿ ಭಾರತದ ನಾಯಕರಾದ ಬಳಿಕ ಆರು ಬಾರಿ 200ರನ್ ಗಡಿ ದಾಟಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನ ಭಾನುವಾರ(ಡಿಸೆಂಬರ್ 03) ದಂದು ಈ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!