By : Oneindia Kannada Video Team
Published : January 03, 2018, 06:36

ನಿಮ್ಮ ಸಿಮ್ ಗೆ ಆಧಾರ್ ಲಿಂಕ್ ಮಾಡಿ, ಆದರೆ ಹೆದರಬೇಡಿ!

ಆಧಾರ್‌ ಕಾರ್ಡ್‌ ಮತ್ತೆ ಸುದ್ದಿಯಲ್ಲಿದೆ. ಕೇಂದ್ರ ಸರ್ಕಾರ ಮೊಬೈಲ್ ನಂಬರ್‌ಗಳನ್ನು ಆಧಾರ್‌ಗೆ ಸಂಪರ್ಕಿಸುವ ಪ್ರಕ್ರಿಯೆಗೆ ಚಾಲನೆ ಕೊಡಲಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಆಸಕ್ತಿ ವಹಿಸಿದ್ದು, ದೂರಸಂಪರ್ಕ ಇಲಾಖೆಗೆ ಈ ಕುರಿತ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಆರ್.ಎಸ್.ಶರ್ಮಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಆಧಾರ್ ಕಾರ್ಡ್ ಮಾಡಿಸುವಾಗಲೇ ಜನರು ಮೊಬೈಲ್ ನಂಬರ್‌ ನೀಡಿರುವುದರಿಂದ ಈ ಸಂಪರ್ಕ ಕೆಲಸ ಸುಲಭವಾಗಲಿದೆ ಎಂದು ಹೇಳಿದ್ದಾರೆ. ಆಧಾರ್‌ಗೆ ಮೊಬೈಲ್ ನಂಬರ್ ಸಂಪರ್ಕಿಸುವುದರಿಂದ ಹೊಸ ಸಿಮ್ ಕಾರ್ಡ್ ಖರೀದಿ ಸಂದರ್ಭದಲ್ಲಿ ಉಪಯೋಗವಾಗಲಿದೆ. ಇನ್ನು ಇಲ್ಲೊಬ್ಬರು ತಮ್ಮ ಸಿಮ್ ಅನ್ನ ಆಧಾರ್ ಗೆ ಲಿಂಕ್ ಮಾಡಿಸೋಕೆ ಮೊಬೈಲ್ ಅಂಗಡಿಗೆ ಹೋದಾಗ ಅಲ್ಲಿ ಏನಾಯ್ತು ಗೊತ್ತಾ? ಈ ವಿಡಿಯೋ ನೋಡಿ. ನೀವೂ ಲಿಂಕ್ ಮಾಡಿಸಲು ಹೋದಾಗ ಹೀಗೆ ಮಾಡಬೇಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!