By : Oneindia Kannada Video Team
Published : December 20, 2017, 10:30

ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಲಿಂಗಾಯತರೇ ಮುಖ್ಯ ದಾಳ

ಗುಜರಾತ್ ನಲ್ಲಿ ಪಾಟೀದಾರ್ ಸಮುದಾಯ ಹೇಗೆ ನಿರ್ಣಾಯಕವೋ, ಹಾಗೇ ಕರ್ನಾಟಕದಲ್ಲಿ ಲಿಂಗಾಯತ/ವೀರಶೈವ ಸಮುದಾಯ. ಅತ್ತ,ಪಾಟೀದಾರ್ ಸಮುದಾಯದ ಹೋರಾಟ ಮೀಸಲಾತಿಗಾಗಿ, ಇತ್ತ ಲಿಂಗಾಯತ ಸಮುದಾಯದ ಹೋರಾಟ ಪ್ರತ್ಯೇಕ ಧರ್ಮಕ್ಕಾಗಿ. ಗುಜರಾತ್ ನಲ್ಲಿ ಸಮುದಾಯಕ್ಕೆ ಮೀಸಲಾತಿ, ಉದ್ಯೋಗ ನೀಡಬೇಕೆಂದು ಆರಂಭವಾದ ಪಾಟೀದಾರರ ಹೋರಾಟ, ನಂತರ ಹಾರ್ದಿಕ್ ಪಟೇಲ್ ನಾಯಕತ್ವದಲ್ಲಿ ಗುಜರಾತ್ ಚುನಾವಣೆಯ ವೇಳೆ ನಿರ್ಣಾಯಕ ಹಂತಕ್ಕೆ ಬಂದು ನಿಂತಿತು. ಹಾರ್ದಿಕ್ ಪಟೇಲ್ ಭಾಷಣ ಕೇಳಲು ಜನಸಾಗರವೇ ಹರಿದುಬರಲಾರಂಭಿಸಿತು, ಅಲ್ಪ ಅವಧಿಯಲ್ಲಿ ಭಾರೀ ಜನಪ್ರಿಯತೆಯನ್ನು ಹಾರ್ದಿಕ್ ಗಳಿಸಿದರು. ಸಮುದಾಯದ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಬಿಜೆಪಿ ಸರಕಾರ ಹೇಳಿದ ನಂತರ, ಪಾಟೀದಾರ್ ಸಮುದಾಯದ ಬೆನ್ನಿಗೆ ಕಾಂಗ್ರೆಸ್ ನಿಂತದ್ದು, ಸಮುದಾಯದ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಕಾಂಗ್ರೆಸ್ ಹೇಳಿದ್ದು, ಇವೆಲ್ಲವೂ ತಕ್ಕಮಟ್ಟಿಗೆ ಕಾಂಗ್ರೆಸ್ಸಿಗೆ ಲಾಭ ತಂದುಕೊಟ್ಟಿತ್ತೇ ಹೊರತು, ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಮಾತ್ರ ಸಾಧ್ಯವಾಗಲಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!