By : Oneindia Kannada Video Team
Published : December 28, 2017, 04:30

ಕರ್ಮದ ಕಾನೂನುಗಳು ಇವೆ ನೋಡಿ

ಒಂದು ಪಕ್ಷಿಯು ಬದುಕಿರುವಾಗ ಇರುವೆಯನ್ನು ತಿಂದು ಬದುಕಿರುತ್ತದೆ. ಅದೇ ಆ ಪಕ್ಷಿ ಸತ್ತಾಗ, ಇರುವೆಯು ಪಕ್ಷಿಯನ್ನು ತಿಂದು ಬದುಕುತ್ತದೆ. ಸಂದರ್ಭಗಳು ಯಾವಾಗ ಬೇಕಾದರೂ ಹೇಗೆ ಬೇಕಾದರೂ ಬದಲಾಗಬಹುದು. ಒಬ್ಬ ಆಟಗಾರ ಕೂಡ, ಮತ್ತೊಬ್ಬ ಅದ್ಭುತ ಆಟಗಾರನ ಕೈಯಲ್ಲಿ ಕೈ ಗೊಂಬೆಯಾಗಿರುತ್ತಾನೆ, ಅದೇ ಅವನ ಕರ್ಮ ಬೇರೆಯವರು ಹೇಗೆ ನಿಮ್ಮನ್ನು ನಡೆಸಿಕೊಳ್ಳುತ್ತಾರೆ ಅದು ಅವರ ಕರ್ಮ, ನೀವು ಹೇಗೆ ಅದಕ್ಕೆ ಸ್ಪಂದಿಸುತ್ತೀರಾ ಅದು ನಿಮ್ಮ ಕರ್ಮ, ಕರ್ಮ ಎಂಬುದು ಮೆನುವಿನ ಪುಸ್ತಕವಲ್ಲ ನೀವು ಬಯಸಿದ್ದು ನಿಮಗೆ ಸಿಗುವುದಿಲ್ಲ, ನೀವು ಹೇಗೆ ಬೇರೆಯವರಿಗೆ ಪ್ರತಿಕ್ರಿಯಿಸುತ್ತೀರಾ ಆ ರೀತಿಯೇ ಕರ್ಮವು ನಿಮಗೆ ಪ್ರತಿಕ್ರಿಯಿಸುತ್ತದೆ. ಯಾರನ್ನು ಕ್ಷೀಣವಾಗಿ ನೋಡಬೇಡಿ, ಈ ದಿನ ನೀವು ಬಲಿಷ್ಠರಾಗಿರಬಹುದು ಆದರೆ ಸಮಯ ನಿಮಗಿಂತ ಬಲಿಷ್ಠವಾಗಿರುತ್ತದೆ, ಯಾರಾದರೂ ನಿನಗೆ ನೋವು ಮಾಡಿದರೆ ಒಂದಲ್ಲ ಒಂದು ದಿನ ಅದನ್ನು ಅವರು ಅನುಭವಿಸುತ್ತಾರೆ. ದೇವರು ಅದನ್ನು ನೋಡಲು ನಿಮಗೆ ಅವಕಾಶ ಕೂಡ ಕಲ್ಪಿಸಿ ಕೊಡುತ್ತಾನೆ, ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ಕೊಡಿ , ದ್ವೇಷಕ್ಕೆ ಎಂದಿಗೂ ಮುಂದಾಗಬೇಡಿ, ಆತನ ಕರ್ಮ ವೇ ಅವನಿಗೆ ಬುದ್ದಿ ಕಲಿಸುವುದು ನೀನು ಉತ್ತಮವಾದುದ್ದನ್ನು ಪಡೆಯಬೇಕಾದರೆ ಕೆಟ್ಟದ್ದನ್ನು ಅನುಭವಿಸಲೇಬೇಕು, ಒಳ್ಳೆಯದನ್ನು ಮಾಡು, ಮುಂದೊಂದು ದಿನ, ನಿನಗೆ ತಿಳಿಯದ ಹಾಗೆಯೇ ಒಳ್ಳೆಯದೆ ಆಗುವುದು. ಕರ್ಮ ಎಂಬುದು ಎಂಥವರನ್ನೂ ಬಿಡುವುದಿಲ್ಲ, ಯಾವುದೋ ಒಂದು ರೀತಿಯಲ್ಲಿ ಖಂಡಿತ ಕಾಣಿಸಿಕೊಳ್ಳುತ್ತದೆ,
ಕರ್ಮದಿಂದ ಮುಕ್ತಿಯಾಗಬೇಕಾದರೆ - ಕೃತಜ್ಞನಾಗಿರು - ಪ್ರೀತಿಯಿಂದ ವರ್ತಿಸು- ಉದ್ದೇಶಗಳನ್ನು ಪರಿಶೀಲಿಸು - ನಿಮ್ಮ ಮನೋಭಾವವನ್ನು ಗಮನದಲ್ಲಿಟ್ಟುಕೋ - ಎಲ್ಲವನು ಕ್ಷಮಿಸು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!