By : Oneindia Kannada Video Team
Published : December 11, 2017, 04:43

ಬಿಜೆಪಿ ಹಾಗು ವಿಶ್ವ ಹಿಂದೂ ಪರಿಷದ್ ಪ್ರತಿಭಟನೆ : ಉತ್ತರ ಕನ್ನಡ ಜಿಲ್ಲೆ ಹೊತ್ತಿ ಉರಿಯುತ್ತಿದೆ

ಹೊನ್ನಾವರ ತಾಲ್ಲೂಕಿನ ಪರೇಶ್ ಮೇಸ್ತ ಎಂಬ ಯುವಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯಾದ್ಯಂತ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿದೆ.ಸೋಮವಾರ ಕಾರವಾರ, ಹೊನ್ನಾವರ, ಕುಮಟಾ, ಮುಂಡಗೋಡದಲ್ಲಿ ಬಂದ್ ಆಚರಣೆ ಮಾಡಲಾಗುತ್ತಿದೆ.
ಕಾರವಾರದಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ನಗರದಾದ್ಯಂತ ಮೆರವಣಿಗೆ ನಡೆಸಿಸ ಹಿಂದೂಪರ ಸಂಘಟನೆಗಳು ಸುಮಾರು ಮೂರು ತಾಸು ಹೆದ್ದಾರಿ ಸಂಚಾರ ಬಂದ್ ಮಾಡಿಸಿದರು. ಸ್ವಯಂಪ್ರೇರಿತ ಬಂದ್ ಎಂದಿದ್ದ ಬಿಜೆಪಿಯವರು ತಾವೇ ಬೆಳ್ಳಂಬೆಳಿಗ್ಗೆಯಿಂದಲೇ ಅಂಗಡಿ, ಸಾರಿಗೆ ಬಸ್ಸು, ಟೆಂಪೋಗಳವರಿಗೆ ಬಂದ್ ಆಚರಿಸಲು ಒತ್ತಾಯಿಸಿದ್ದಾರೆ. ಕಿಡಿಗೇಡಿಗಳ ಗುಂಪೊಂದು ಅಗ್ನಿಶಾಮಕ ದಳದ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದೆ.ಕುಮಟಾದಲ್ಲಿ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಅವರ ಕಾರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. 2 ಪೊಲೀಸ್ ವಾಹನ ಜಖಂಗೊಳಿಸಿದ್ದಾರೆ. 3ಬಸ್ ಹಾಗೂ 4 ಬಸ್ಸುಗಳು ಜಖಂಗೊಂಡಿದೆ. 30 ಪೊಲೀಸರು ಗಾಯಗೊಂಡಿದ್ದಾರೆ.ರಕ್ಷಣೆಗೆ ನಿಂತ ಪೊಲೀಸರ ಮೇಲೆ ಉದ್ರಿಕ್ತ ಗುಂಪು ಕಲ್ಲೆಸೆದಿದ್ದಾರೆ. ಇದರಿಂದಾಗಿ ಅವರನ್ನು ತಡೆಯಲು ಅಶ್ರುವಾಯು ಸಿಡಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!