By: Oneindia Kannada Video Team
Published : January 05, 2018, 01:22

ಕೊಪ್ಪಳದ ಇಬ್ಬರು ಯುವಕರಿಗೆ ಪೊಲೀಸರಿಂದ ನಿರ್ದಾಕ್ಷಿಣ್ಯವಾಗಿ ಥಳಿತ

Subscribe to Oneindia Kannada

ಕೊಪ್ಪಳದಲ್ಲಿ ದಾರುಣಾಕರ ಘಟನೆ ಒಂದು ಜರುಗಿದೆ . ವಿಡಿಯೋದಲ್ಲಿ ಪೊಲೀಸರು ಇಬ್ಬರು ಯುವಕರಿಗೆ ಪೊಲೀಸ್ ಠಾಣೆಯೊಳಗೆ ಬೆಲ್ಟ್ ನಿಂದ ಥಳಿಸುತ್ತಿರುವ ದೃಶ್ಯವನ್ನು ನೀವು ನೋಡಬಹುದು . ಈ ವಿಡಿಯೋ ಈಗ ರಾಜ್ಯದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಪೊಲೀಸರು ಹೀಗೆ ತಾಳಿಸುವಾಗ ವ್ಯಕ್ತಿ ಓರ್ವ ಮೊಬೈಲ್ ನಲ್ಲಿ ಈ ದೃಶ್ಯವನ್ನು ಸೆರೆಹಿಡಿದಿದ್ದಾನೆ . ಮಾಹಿತಿಗಳ ಪ್ರಕಾರ ಕೊಪ್ಪಳದಲ್ಲಿ ದೇವಸ್ಥಾನದ ಜಾತ್ರೆ ಇದ್ದಂತ ಕಾರಣ ರಸ್ತೆಗಳಲ್ಲಿ ವಾಹನಗಳು ಓಡಾಡದಂತೆ ತಡೆಯಲಾಗಿತ್ತು . ಬೈಕ್ ನಲ್ಲಿ ಬಂಡ ಇಬ್ಬರು ಸವಾರರು ಸಿಗ್ನಲ್ ಜಂಪ್ ಮಾಡಿದ ಕಾರಣ ಪೊಲೀಸರು ಅವರನ್ನು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ . ಮಾತಿಗೆ ಮಾತು ಬೆಳೆದ ನಂತರ ಅವರಿಬ್ಬರನ್ನು ಪೊಲೀಸರು ಠಾಣೆಗೆ ಕರೆತಂದು ಥಳಿಸಿದ್ದಾರೆ . ಕೊಪ್ಪಳದ ಎಸ್ ಪಿ ಅನಿಲ್ ಶೆಟ್ಟಿ ಅವರು ಪ್ರಕರಣವನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ .

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!