By: Oneindia Kannada Video Team
Published : January 02, 2018, 11:04

ಕೋಡಿ ಮಠದ ಸ್ವಾಮೀಜಿಗಳು ನುಡಿದ ಭವಿಷ್ಯ ಮುಂದಿನ ಕರ್ನಾಟಕದ ಸಿಎಂ ಯಾರು?

Subscribe to Oneindia Kannada

ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಹೂವಿನಹಡಗಲಿಯಲ್ಲಿರುವ ಮೈಲಾರ ಲಿಂಗೇಶ್ವರ ಮತ್ತು ರಾಣೆಬೆನ್ನೂರಿನಲ್ಲಿರುವ ದೇವರಗುಡ್ಡದ ಮಾಲತೇಶ ಸ್ವಾಮಿ ಸನ್ನಿಧಾನದಲ್ಲಿ ಗೊರವಪ್ಪ ಕಳೆದ ವರ್ಷವೂ ಭವಿಷ್ಯ ನುಡಿದಿದ್ದಾರೆ. ಇದರ ಜೊತೆಗೆ ಕೆಲವು ಜ್ಯೋತಿಷಿಗಳು ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ, ಕೆಲವರು ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರ ಬರುತ್ತೆ, ಗುರುಬಲದಲ್ಲಿ ಪ್ರಧಾನಿ ಮೋದಿ ಇನ್ನಷ್ಟು ಎತ್ತರಕ್ಕೆ ಹೋಗುತ್ತಾರೆ. ಹೀಗೆಲ್ಲಾ 2017ರಲ್ಲಿ ಭವಿಷ್ಯ ನುಡಿಯಲಾಗಿತ್ತು.ಇದಲ್ಲದೇ ನಾಗಾಸಾಧುಗಳೂ ಭವಿಷ್ಯ ನುಡಿದಿದ್ದಾಗಿದೆ. ಆದರೆ, ಎಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗ್ರಹಗತಿಯ ಬಗ್ಗೆ ಯಾರೂ ಕಳೆದ ವರ್ಷ ಭವಿಷ್ಯ ನುಡಿದ ಬಗ್ಗೆ ವರದಿಯಾಗಿಲ್ಲ.ಜ್ಯೋತಿಷಿಗಳು ನುಡಿದಂತೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೋ, ಕುಮಾರಸ್ವಾಮಿ ಸಿಎಂ ಆಗ್ತಾರೋ, ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರುತ್ತೋ ಎನ್ನುವ ಇವರ ಭವಿಷ್ಯದ ಸತ್ಯಾಸತ್ಯತೆ ಅರಿತುಕೊಳ್ಳಲು ಇನ್ನೂ ಸಮಯವಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!