By: Oneindia Kannada Video Team
Published : December 22, 2017, 06:22

ಕಾರವಾರದಲ್ಲಿ ಡಿಸೆಂಬರ್ 26ರಿಂದ ಡಿಸೆಂಬರ್ 30ರವೆರೆಗೆ ಆಹಾರ ಮೇಳ

Subscribe to Oneindia Kannada

ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಆಯೋಜಿಸುತ್ತಿರುವ ಉತ್ತರಕನ್ನಡ ಜಿಲ್ಲಾಡಳಿತ ಈ ಬಾರಿ ಪ್ರಥಮ ಬಾರಿಗೆ 'ಕಾರವಾರ ಆಹಾರ ಮೇಳ' ಆಯೋಜಿಸಲು ಸಜ್ಜಾಗಿದೆ.ಕಾರವಾರದ ಕಾಳಿ ನದಿ ದಂಡೆಯ ಮೇಲಿರುವ ಕಾಳಿ ರಿವರ್ ಗಾರ್ಡನ್ ನಲ್ಲಿ ಡಿಸೆಂಬರ್ 26 ರಿಂದ ಡಿ. 30ರ ವರೆಗೆ ಈ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮೇಳದಲ್ಲಿ ರಾಜ್ಯದ ಕರಾವಳಿ ಭಾಗದ ಆಹಾರಗಳು ಹೆಚ್ಚಿನ ಆಕರ್ಷಣೆಯಾಗಲಿದ್ದು, ಮಂಗಳೂರು, ಕಾರವಾರದ ಸಮುದ್ರ ಆಹಾರ ಸೇರಿದಂತೆ 70 ಬಗೆ-ಬಗೆಯ ತರಹೇವಾರಿ ಆಹಾರ ಜನರ ಬಾಯಲ್ಲಿ ನೀರೂರಿಸಲಿದೆ.ಅಷ್ಟೇ ಅಲ್ಲದೇ ಸಂಗೀತ ಪ್ರಿಯರಿಗಾಗಿ ಈ ಆಹಾರ ಮೇಳದಲ್ಲಿ ವಿಶೇಷವಾಗಿ ಸಂಜೆ 7ರಿಂದ ರಾತ್ರಿ 9.30 ರವರೆಗೆ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೆಲ್ಲ ಇದೆ ಇನ್ನೇನು ಬೇಕು ಈ ಮೇಳದಲ್ಲಿ ಬಾಗವಹಿಸಿ ಊಟ ರುಚಿ ಸವಿಯಿರಿ. ಮೇಳದಲ್ಲಿ ರುಚಿ ಸವಿಯಲು ಇಚ್ಛಿಸುವವರಿಗೆ ಕೇವಲ 20 ರು. ಪ್ರವೇಶ ಶುಲ್ಕ ಇರಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!