By: Oneindia Kannada Video Team
Published : November 16, 2017, 01:57

ಕರ್ನಾಟಕ ಖಾಸಗಿ ವೈದ್ಯರ ಮುಷ್ಕರ : ಸಾಮಾಜಿಕ ಜಾಲತಾಣಗಳಲ್ಲಿ ಛೀಮಾರಿ

Subscribe to Oneindia Kannada

ಖಾಸಗಿ ವೈದ್ಯರ ಮುಷ್ಕರಕ್ಕೆ ಸಾಮಾಜಿಕ ಜಾಲತಾಣಗಳಲ್ಲೂ ಛೀಮಾರಿ! 'ವೈದ್ಯೋ ನಾರಾಯಣೋ ಹರಿಃ' ಎಂದು ಜೀವ ಉಳಿಸುವ ವೈದ್ಯರನ್ನು ದೇವರಿಗೆ ಹೋಲಿಸುವ ಸಂಸ್ಕೃತಿ ನಮ್ಮದು. ಆದರೆ ಕಳೆದ ಮೂರು ದಿನಗಳಿಂದ ಹಟಕ್ಕೆ ಕಟ್ಟುಬಿದ್ದ ವೈದ್ಯರು ಮತ್ತು ಸರ್ಕಾರದ ನಡುವಲ್ಲಿ ಅಡಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾದ ಜನಸಾಮಾನ್ಯರ ಪಾಡು ಮಾತ್ರ ಆ ದೇವರಿಗೂ ಅರ್ಥವಾಗದಿರುವುದು ದುರಂತ! 15ಕ್ಕೂ ಹೆಚ್ಚು ಅಮಾಯಕರ ಸಾವಿಗೆ ಹೊಣೆ ಯಾರು? ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್ಲು ಮತ್ತು ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ನಡೆದ ಹಲವು ಅಹಿತಕರ ಘಟನೆಗಳನ್ನು ಮನಗಂಡು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ(ಕೆಪಿಎಂಇ) ತಿದ್ದುಪಡಿ ಮಸೂದೆ 2017 ಅನ್ನು ಜಾರಿಗೆ ತರಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಇದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವ ವೈದ್ಯರೂ ಸಮಸ್ಯೆ ಎದುರಿಸಬೇಕಾದೀತು ಎಂಬ ಆತಂಕ ನಿಜವಿರಬಹುದು. ಆದರೆ ಅದಕ್ಕಾಗಿ ನಿರ್ದಯವಾಗಿ ಮುಷ್ಕರಕ್ಕೆ ಕೂತು, ಅಮಾಯಕ ಜನರ ಸಾವಿಗೆ ಕಾರಣವಾಗುತ್ತಿರುವುದು ಸರಿಯೇ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!