By: Oneindia Kannada Video Team
Published : November 17, 2017, 03:03

ಕರ್ನಾಟಕ ಖಾಸಗಿ ವೈದ್ಯರ ಮುಷ್ಕರ : ಸಿದ್ದರಾಮಯ್ಯ ವಿರುದ್ಧ ಹೈ ಕಮಾಂಡ್ ಗೆ ದೂರು

Subscribe to Oneindia Kannada

ಸಿದ್ದರಾಮಯ್ಯ ವಿರುದ್ಧ ಅತೃಪ್ತರಿಂದ ಹೈಕಮಾಂಡ್‌ಗೆ ದೂರು. ಕರ್ನಾಟಕ ವೈದ್ಯಕೀಯ ಸಂಸ್ಥೆಗಳ ಕಾಯ್ದೆ ತಿದ್ದುಪಡಿ ಮಸೂದೆ ದಿನೇ ದಿನೇ ಜಟಿಲವಾಗುತ್ತಾ ಹೋಗುತ್ತಿದೆ. ಅದು ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿಗೆ ಸುತ್ತಿ ಹಾಕಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ.ಕಾಯ್ದೆ ಮಂಡನೆ ವಿರೋಧಿಸಿ ಖಾಸಗಿ ವೈದ್ಯರು ಮುಷ್ಕರ ಹೂಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪರಿಸ್ಥಿತಿ ವಿಷಮಕ್ಕೆ ತಿರುಗಿತ್ತು. ಇದರಿಂದ ಮುಖ್ಯಮಂತ್ರಿಗಳು ಮಾಧ್ಯಮದಿಂದ ಹಾಗೂ ಸಾರ್ವಜನಿಕರಿಂದಲೂ ಸಾಕಷ್ಟು ಮೂದಲಿಕೆಗೆ ಒಳಗಾಗಬೇಕಾಯಿತು. ವಿರೋಧ ಪಕ್ಷಗಳೂ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.ಇದೆಲ್ಲದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನ ಶಾಸಕರ ಪಾಳೆಯದಲ್ಲೇ ಕಾಯ್ದೆಯ ಪರ-ವಿರೋಧ ಬಣಗಳು ನಿರ್ಮಾಣವಾಗಿ ಜಿದ್ದಾ ಜಿದ್ದಾಗಿ ಇಳಿದಿರುವುದು ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿದೆ.ಕಾಯ್ದೆ ವಿರೋಧಿ ಬಣದ ಸದಸ್ಯರು ಈಗ ಹೈಕಮಾಂಡ್ ಗೆ ಸಿದ್ದರಾಮಯ್ಯ ವಿರುದ್ಧ ದೂರು ಕೂಡ ನೀಡಿದ್ದಾರೆ. ಇಮೇಲ್ ಮುಖಾಂತರ ತಮ್ಮ ದೂರು ಸಲ್ಲಿಸಿರುವ ಅತೃಪ್ತ ಶಾಸಕರು ಸಿದ್ದರಾಮಯ್ಯ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.ಶಾಸಕರು ಹೈಕಮಾಂಡ್ ಗೆ ಬರೆದ ಪತ್ರದಲ್ಲಿ ಏನಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!