By: Oneindia Kannada Video Team
Published : November 10, 2017, 01:06

ಟಿಪ್ಪು ಸುಲ್ತಾನ್ ರ 265ನೇ ಹುಟ್ಟು ಹಬ್ಬವನ್ನ ಆಚರಿಸುತ್ತಿರುವ ಕರ್ನಾಟಕ ಸರ್ಕಾರ

Subscribe to Oneindia Kannada

"ಸಿದ್ದರಾಮಯ್ಯನವರ ಅಹಂಕಾರ ತೃಪ್ತಿ ಪಡಿಸೋದಕ್ಕೆ ಟಿಪ್ಪು ಜಯಂತಿ!" ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಂಕಾರವನ್ನು ತೃಪ್ತಿ ಪಡಿಸುವುದಕ್ಕಾಗಿ ಬೆಂಗಳೂರೊಂದರಲ್ಲೇ 11,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಿ, ದೇಶದ್ರೋಹಿ ಟಿಪ್ಪುವಿನ ಜಯಂತಿ ಆಚರಿಸಲಾಗುತ್ತಿದೆ!" ಎಂದು ಬಿಜೆಪಿ ನಾಯಕ, ಶಾಸಕ ಸಿ.ಟಿ.ರವಿ ಟ್ವೀಟ್ ಮಾಡಿದ್ದಾರೆ.ಕಳೆದ ಎರಡು ವರ್ಷಗಳಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿ ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಇಂದು(ನ.10) ರಾಜ್ಯದಾದ್ಯಂತ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಬಿಗುವಿನ ವಾತಾವರಣ ಮೂಡಿದೆ.ಬಿಜೆಪಿಯ ಹಲವು ನಾಯಕರು ಟಿಪ್ಪು ಜಯಂತಿಯನ್ನು ವಿರೋಧಿಸಿದ್ದಾರೆ. ಜೊತೆಗೆ ಟಿಪ್ಪು ಜಯಂತಿಯ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇದರೊಂದಿಗೆ ಟ್ವಿಟ್ಟರ್ ನಲ್ಲಿಯೂ ಟಿಪ್ಪು ಜಯಂತಿಯ ಕುರಿತು ವಿರೋಧದ ಧ್ವನಿಯೇ ಹೆಚ್ಚಾಗಿ ಮೊಳಗುತ್ತಿದೆ. ಟಿಪ್ಪು ಸುಲ್ತಾನ್ ರ 265ನೇ ಹುಟ್ಟು ಹಬ್ಬವನ್ನ ಆಚರಿಸುತ್ತಿರುವ ಕರ್ನಾಟಕ ಸರ್ಕಾರ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!