By : Oneindia Kannada Video Team
Published : December 02, 2017, 05:10

ಕರ್ನಾಟಕ ಚುನಾವಣೆ 2018 : ಜೆಡಿಎಸ್ ನಲ್ಲಿ ಜನತಾ ಪರಿವಾರ ಮತ್ತೆ ಒಂದಾಗುತ್ತಾ?

ಟಿ.ಎ.ಶರವಣ ಸಂದರ್ಶನ : ಎಚ್ಡಿಕೆ ಸಿಎಂ ಆಗುವುದನ್ನು ಯಾರೂ ತಪ್ಪಿಸಲಾರರು. ಚಿನ್ನದ ವ್ಯಾಪಾರಿಯಾಗಿ, ಸಮಾಜಸೇವಕನಾಗಿ, ಜೆಡಿಎಸ್ ವಕ್ತಾರನಾಗಿ, ದೇವೇಗೌಡರ ಆತ್ಮೀಯನಾಗಿ ಗುರುತಿಸಿಕೊಂಡಿರುವ ಕುಳ್ಳದೇಹದ ಟಿಎ ಶರವಣ ಅವರಲ್ಲಿ ಬೆಟ್ಟದಷ್ಟು ಆಕಾಂಕ್ಷೆಗಳಿವೆ. ಅವುಗಳಲ್ಲಿ ಕುಮಾರಣ್ಣನನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂಡಿಸುವುದು ಮತ್ತು ತಾವೇ ಸ್ವತಃ ವಿಧಾನಸೌಧದ ಮೆಟ್ಟಿಲೇರುವುದೂ ಒಂದು. ದೇವೇಗೌಡರಿಗಾಗಿ ಮತ್ತು ಕುಮಾರಣ್ಣನಿಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲಿಕ, ಆರ್ಯ ವೈಶ್ಯ ಸಮಾಜದ ಧುರೀಣ ಶರವಣ ಅವರು ಒನ್ಇಂಡಿಯಾ ಕನ್ನಡ ಕಚೇರಿಗೆ ಆಗಮಿಸಿ, ಮುಂದಿನ ಚುನಾವಣೆ, ಜೆಡಿಎಸ್ ಸಾಮರ್ಥ್ಯದ ಬಗ್ಗೆ ನಿರರ್ಗಳವಾಗಿ ಮಾತನಾಡಿದ್ದಾರೆ.ಬಡವರಿಗಾಗಿ ಹಗಲಿರುಳೂ ಶ್ರಮಿಸುತ್ತಿರುವ 'ಟೈಗರ್' ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾವುದೇ ಪಕ್ಷಗಳ ಹಂಗಿಲ್ಲದೆ ಜಾತ್ಯತೀತ ಜನತಾದಳ ಸ್ವಸಾಮರ್ಥ್ಯದಿಂದ ಸ್ಪಷ್ಟ ಬಹುಮತ ಪಡೆಯಲಿದೆ. ಇದು ನನ್ನ ಮಾತಲ್ಲ, ಇಡೀ ರಾಜ್ಯದ ಜನತೆಯ ಇಚ್ಛೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!