By : Oneindia Kannada Video Team
Published : April 05, 2018, 12:07

ವಿಧಾನಸಭಾ ಚುನಾವಣೆ : ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳು

ಉತ್ತರ ಕನ್ನಡ, ಏಪ್ರಿಲ್ 03 : 'ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು, ನಡು ಮಧ್ಯದಲಿ ಅಡಕೆ ತೆಂಗುಗಳ ಮಡಿಲು, ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ, ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ' ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರು ಉತ್ತರ ಕನ್ನಡದ ಭೌಗೋಳಿಕ ಲಕ್ಷಣವನ್ನು ವಿವರಿಸಿದ ಪರಿ ಇದು. ಒಂದು ಕಡೆ ಹಸಿರು ಸಸ್ಯ ಕಾಶಿಗಳನ್ನೊಳಗೊಂಡ ಸಹ್ಯಾದ್ರಿ ಬೆಟ್ಟ. ಇನ್ನೊಂದು ಕಡೆ ಅರಬ್ಬೀ ಸಮುದ್ರ. ಘಟ್ಟದ ಮೇಲ್ಭಾಗದಲ್ಲಿ ಅಡಿಕೆ ತೆಂಗುಗಳ ಪ್ರಪಂಚ ಮಲೆನಾಡು. ಬಹುತೇಕ ಅರಣ್ಯ ಭಾಗ, ಸಮುದ್ರ ಪ್ರದೇಶವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒಂದು ರೀತಿಯಲ್ಲಿ ಪರಿಸರವೇ ಮಾರಕವಾದಂತಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!