By : Oneindia Kannada Video Team
Published : February 16, 2018, 04:49

ಕರ್ನಾಟಕ ಬಜೆಟ್ 2018 : ಮುಸ್ಲಿಮರಿಗೆ ಸಿದ್ದರಾಮಯ್ಯನವರ ಭರ್ಜರಿ ಕೊಡುಗೆಗಳು

ನಾವು ಯಾವುದೇ ಜಾತಿಯನ್ನು ಓಲೈಸುವುದಿಲ್ಲ, ನಮ್ಮದು ಜಾತ್ಯತೀತ ಸರಕಾರ ಎಂದು ಹೋದಲ್ಲೆಲ್ಲ ಘಂಟಾಘೋಷವಾಗಿ ಸಾರುವ ಸಿದ್ದರಾಮಯ್ಯನವರು, ಪ್ರಸ್ತುತ ಸರಕಾರದ ಕಟ್ಟಕಡೆಯ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಪರ ತಮಗಿರುವ ಒಲವನ್ನು ಮತ್ತೆ ತೋರಿದ್ದಾರೆ. ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆಯಾಗುವುದೊಂದೇ ಬಾಕಿಯಿದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಿರುವಾಗ, ಸಿದ್ದರಾಮಯ್ಯನವರು ಸಹಜವಾಗಿ ಬಜೆಟ್ಟಿನಲ್ಲಿ ಚುನಾವಣಾ ದಾಳ ಉರುಳಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!