By : Oneindia Kannada Video Team
Published : November 13, 2017, 02:57

Karnataka Assembly Elections 2018 : ಬಿಜೆಪಿ ಮೇಲೆ ಸಿದ್ದರಾಮಯ್ಯ ಅಟ್ಯಾಕ್

ನಿಮ್ಮ ಉಸ್ತುವಾರಿಯೇ ಹೀಗಿರುವಾಗ, ಬಿಜೆಪಿ ಬ್ಲೂಫಿಲಂ ವಿಚಾರ ಏಕೆ? ಬೆಂಗಳೂರು ವಿಜಯನಗರದಲ್ಲಿನ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಧಿವೇಶನದ ವೇಳೆ ಬಿಜೆಪಿಯ ಮಹಾನುಭಾವರು ನೀಲಿಚಿತ್ರ ವೀಕ್ಷಿಸಿದ್ದನ್ನು ಮತ್ತೆ ಜನರಿಗೆ ನೆನೆಪಿಸಿದ್ದಾರೆ. ಆದರೆ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯ ಮೇಲೆ ಲೈಂಗಿಕ ದೌರ್ಜನ್ಯದ ಕೇಸ್ ದಾಖಲಾಗಿದೆಯಲ್ಲಾ ಅದರೆ ಕಥೆ ಏನು ಎನ್ನುವುದೀಗ ಸಿಎಂ ಸೇರಿ, ಕಾಂಗ್ರೆಸ್ ಮುಖಂಡರಲ್ಲಿ ಪ್ರಶ್ನೆ? ಅತ್ತ ಬಿಜೆಪಿಯ ಪರಿವರ್ತನಾ ಯಾತ್ರೆಯ ವೇಳೆ, ಸೋಲಾರ್ ಹಗರಣದ ಹೀರೋಯಿನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಅವರನ್ನು ರಾಜ್ಯಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಬಿಜೆಪಿ ಮುಖಂಡರು ಅಬ್ಬರಿಸಿದ್ದಾರೆ.ಇತ್ತ ಸಿದ್ದರಾಮಯ್ಯನವರು ಬಿಜೆಪಿಗೆ ಮಾನಮರ್ಯಾದೆ ಅನ್ನೋದು ಇಲ್ಲ ಎಂದು ಹೇಳಿಕೆ ನೀಡಿದರೆ, ಅತ್ತ ಕರಾವಳಿಯಲ್ಲಿರುವ ಬಿಜೆಪಿ ಮುಖಂಡರು, ಸಿದ್ದರಾಮಯ್ಯಗೆ ಯೋಗ್ಯತೆ ಅನ್ನೋದೇ ಇಲ್ಲ ಎಂದು ಅಬ್ಬರಿಸಿದ್ದಾರೆ. ಇಬ್ಬರ ಈ ರಾಜಕೀಯ ಮೇಲಾಟ ನೋಡಿದರೆ, ಮಾಡೋದೆಲ್ಲಾ..ಅನಾಚಾರ.. ಮನೆಮಂದೆ ಬೃಂದಾವನ ಎನ್ನುವಂತಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!