By : Oneindia Kannada Video Team
Published : November 08, 2017, 09:50

ಕರ್ನಾಟಕ ವಿಧಾನಸಭಾ ಚುನಾವಣೆ 2018 : ಜೆಡಿಎಸ್ ವಿಕಾಸ ಯಾತ್ರೆ ಬಗ್ಗೆ ಎಚ್ ಡಿ ಕುಮಾರಸ್ವಾಮಿ ಮಾತು

ಚುನಾವಣಾ ಪೂರ್ವː ಕಾವಿ-ಖಾದಿಧಾರಿಗಳ ನಡುವೆ ಮೈತ್ರಿ ಏನು? ಎತ್ತ? ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಭಾವ ಕರ್ನಾಟಕದ ರಾಜಕೀಯದ ಮೇಲೆ ಬೀಳುತ್ತಿರುವುದು ಈಗ ಸ್ಪಷ್ಟವಾಗಿದೆ. ಸ್ವಾಮೀಜಿ, ಮಠಾಧೀಶರು ಚುನಾವಣೆ ಅಖಾಡಕ್ಕೆ ಇಳಿಯಲು ಮುಂದಾಗುತ್ತಿದ್ದಾರೆ. ಆರೆಸ್ಸೆಸ್, ಬಿಜೆಪಿ ಅಲ್ಲದೆ ಕಾಂಗ್ರೆಸ್ ಕೂಡಾ ಖಾವಿಧಾರಿಗಳ ಮನ ಓಲೈಕೆಯಲ್ಲಿ ತೊಡಗಿವೆ. ಉತ್ತರ ಪ್ರದೇಶದಲ್ಲಿ ಗೋರಖ್‌ ನಾಥ ಪರಂಪರೆಯ ಯೋಗಿ ಆದಿತ್ಯನಾಥ್ ಅವರು ದಿಗ್ವಿಜಯ ಸಾಧಿಸಿರುವುದು ಈಗ ಇತಿಹಾಸ. ಕರ್ನಾಟಕದಲ್ಲೂ ಇದೇ ರೀತಿ ಬದಲಾವಣೆಯ ಅಲೆ ತರಲು ಬಿಜೆಪಿ ಯತ್ನಿಸುತ್ತಿದೆ.ರಾಜ್ಯ ಕೆಲ ಪ್ರಮುಖ ಮಠಾಧೀಶರನ್ನು ಚುನಾವಣಾ ಕಣಕ್ಕಿಳಿಸುವ ಯೋಜನೆಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಕಿಕೊಂಡಿದ್ದಾರೆ. ಮತ ಬ್ಯಾಂಕಿಗೆ ಅನುಗುಣವಾಗಿ ಎಲ್ಲಾ ಜಾತಿ ವರ್ಗದ ಮಠಾಧೀಶರಿಗೆ ಗಾಳ ಹಾಕಲಾಗುತ್ತಿದೆ. ಮುಖ್ಯವಾಗಿ ಸಿಎಂಸಿದ್ದರಾಮಯ್ಯನವರ ಅಹಿಂದ ಮತ ಬ್ಯಾಂಕ್‌ ಒಡೆಯುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಇದರಲ್ಲಿ ಯಾರು ಗೆಲ್ಲುವರೋ, ಖಾವಿಧಾರಿಗಳು ಖಾಕಿಧಾರಿಗಳ ನಡುವಿನ ಈ ಮೈತ್ರಿಯಿಂದ ರಾಜ್ಯಕ್ಕೇನು ಉಪಯೋಗ ಕಾದು ನೋಡಬೇಕಿದೆ. ಸದ್ಯಕ್ಕೆ ಯಾವ ಯಾವ ಸ್ವಾಮೀಜಿಗಳು ಚುನಾವಣೆ ಬಗ್ಗೆ ಆಸಕ್ತಿ ತೋರಿದ್ದಾರೆ? ಸ್ಪರ್ಧೆ ಬಗ್ಗೆ ಏನು ಹೇಳಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!