By : Oneindia Kannada Video Team
Published : December 04, 2017, 12:53

ಕರ್ನಾಟಕ ವಿಧಾನಸಭಾ ಚುನಾವಣೆ 2018 : ನಾಗಾಸಾಧುಗಳ ಮತ್ತೊಂದು ಭವಿಷ್ಯ

ಕರ್ನಾಟಕ ಅಸೆಂಬ್ಲಿ ಚುನಾವಣೆ: ನಾಗಾ ಸಾಧುಗಳು ನುಡಿದ ಇನ್ನೊಂದು ಭವಿಷ್ಯ! ಸಂಕ್ರಾಂತಿ, ಯುಗಾದಿ, ದಸರಾಗೆ.. ಹೀಗೆ.. ಕೋಡಿಮಠದ ಶ್ರೀಗಳು ಅವಾಗಾವಾಗ ಭವಿಷ್ಯ ನುಡಿಯುವ ಪದ್ದತಿಯನ್ನು ರೂಢಿಸಿಕೊಂಡು ಬಂದಿದ್ದಾರೆ. ಇವರ ಭವಿಷ್ಯದ ಬಗ್ಗೆ ಭಾರೀ ಚರ್ಚೆ ನಡೆಯುವುದನ್ನೂ ಕೇಳಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಪರೂಪ ಎನ್ನುವಂತೆ ಶಿವನ ಆರಾಧಕರಾಗಿರುವ ನಾಗಸಾಧುಗಳು ಮುಂದಿನ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿಯಲಾರಂಭಿಸಿರುವುದು ವಿಶೇಷ. ಕಳೆದ ಒಂದು ತಿಂಗಳಲ್ಲಿ ನಾಗಸಾಧುಗಳು, ಕರ್ನಾಟಕ ಮುಂದಿನ ಚುನಾವಣಾ ಫಲಿತಾಂಶದ ಬಗ್ಗೆ ಮೂರು ಭವಿಷ್ಯ ನುಡಿದಿದ್ದಾರೆ.ಒಂದು, ಯಡಿಯೂರಪ್ಪನವರ ಮನೆಗೆ ಭೇಟಿ ನೀಡಿ ಭವಿಷ್ಯ ನುಡಿದಿದ್ದು, ಇನ್ನೊಂದು ಹರಿದ್ವಾರದಿಂದ ಎಚ್ ಡಿ ಕುಮಾರಸ್ವಾಮಿಯ ಆಪ್ತರಿಗೆ ದೂರವಾಣಿ ಮೂಲಕ ಭವಿಷ್ಯ ನುಡಿದಿದ್ದು. ಆದರೆ, ನಾಗಸಾಧುಗಳು ನುಡಿದ ಈ ಎರಡು ಭವಿಷ್ಯ, ಒಂದಕ್ಕೊಂದು ತಾಳೆಯಾಗುತ್ತಿಲ್ಲ ಎನ್ನುವುದು ಗಮನಿಸಬೇಕಾದ ಅಂಶ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!