By : Oneindia Kannada Video Team
Published : March 01, 2018, 06:03

ಕರ್ನಾಟಕ ವಿಧಾನಸಭಾ ಚುನಾವಣೆ 2013 : ಗೆದ್ದವರ ಪಟ್ಟಿ ಇಲ್ಲಿದೆ

2018ರ ಕರ್ನಾಟಕ ಅಸೆಂಬ್ಲಿ ಚುನಾವಣೆಗೆ ಇನ್ನೇನು ಎರಡು ತಿಂಗಳು ಬಾಕಿಯಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಕರೆಸಿದರೆ, ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರನ್ನು ಕರೆಸಿ ಹಲವು ಸುತ್ತಿನ ಪ್ರಚಾರ ಆರಂಭಿಸಿದೆ. ಇನ್ನು ಜೆಡಿಎಸ್ ಪರವಾಗಿ ದೇವೇಗೌಡ್ರು, ಕುಮಾರಸ್ವಾಮಿ ಮತಬೇಟೆ ಆರಂಭಿಸಿದ್ದಾರೆ ಜೊತೆಗೆ ಮಾಯಾವತಿಯವರನ್ನೂ ಕರೆಸಿ ಒಂದು ರೌಂಡಿನ ಪ್ರಚಾರ ಮಾಡಿಸಿದ್ದಾರೆ. ಜೆಡಿಎಸ್ ಪರ ಓವೈಸಿ ಬರುತ್ತಾರೋ, ಇನ್ನೂ ಅಂತಿಮವಾಗಿಲ್ಲ. ತಿಂಗಳುಗಟ್ಟಲೆ ಚುನಾವಣಾ ಪ್ರಚಾರ ಮಾಡಿ, ಕಾರ್ಯಕರ್ತರನ್ನು ಒಗ್ಗೂಡಿಸಿ, ಕೋಟ್ಯಾಂತರ ರೂಪಾಯಿ ವ್ಯಯಿಸಿ, ಸಾವಿರ ಓಟಿಗಿಂತಲೂ ಕಮ್ಮಿ ಅಂತರದಿಂದ ಸೋತರೆ ಅಂಥವರ ಮನಸ್ಥಿತಿ ಹೇಗಿರಬೇಡ. ಆ ಹನ್ನೊಂದು ಅಭ್ಯರ್ಥಿಗಳು ಯಾರು? ಸೋಲಲ್ಲೂ ಸಾರ್ಥಕತೆ ಮರೆದವರು ಯಾವ ಪಕ್ಷದವರು?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!