By: Oneindia Kannada Video Team
Published : November 02, 2017, 01:41

82ನೇ ವಯಸ್ಸಿನಲ್ಲಿ ತಂದೆಯಾದ ಕಲಬುರಗಿಯ ಶರಣಬಸಪ್ಪ ಅಪ್ಪಾ

Subscribe to Oneindia Kannada

ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಡಾ. ಶ್ರೀ ಶರಣಬಸಪ್ಪ ಅಪ್ಪಾ ಅವರು 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾಗಿದ್ದಾರೆ. ಶ್ರೀ ಶರಣಬಸಪ್ಪ ಅಪ್ಪಾ ಅವರ ಎರಡನೇ ಪತ್ನಿ ದಾಕ್ಷಾಯಿಣಿ ಅವರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸಂಸ್ಥಾನಕ್ಕೆ ನೂತನ ವಾರಸುದಾರ ಬಂದಂತಾಗಿದೆ. ಇದರಿಂದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಭಕ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಡಾ. ಶರಣಬಸವಪ್ಪ ಅಪ್ಪಾ ಅವರಿಗೆ ಎರಡು ಮದುವೆಯಾಗಿದ್ದು, ಮೊದಲನೆ ಪತ್ನಿ ಕೋಮಲಾತಾಯಿ ಐದು ಮಂದಿ ಪುತ್ರಿಯರಿಗೆ ಜನನ ನೀಡಿದ್ದರು. ಆದರೆ ಮೊದಲ ಪತ್ನಿ ಕೋಮಲಾತಾಯಿ ಹಲವು ವರ್ಷಗಳ ಹಿಂದೆಯೇ ಅನಾರೋಗ್ಯದಿಂದ ಮೃತಪಟ್ಟಿದ್ದರು. ಮೊದಲ ಪತ್ನಿಯ ಮೃತಪಟ್ಟ ಬಳಿಕ ದಾಕ್ಷಾಯಿಣಿ ಅವರನ್ನು ಶರಣಬಸಪ್ಪ ಅಪ್ಪಾ ಅವರು ಮದುವೆಯಾಗಿದ್ದರು. ಎರಡನೇ ಪತ್ನಿ ಅವರಿಗೆ ಈಗಾಗಲೇ ಮೂರು ಹೆಣ್ಣು ಮಕ್ಕಳು ಜನಿಸಿದ್ದು, ಇದೀಗ ಗಂಡು ಮಗುವಿಗೆ ಜನನ ನೀಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!