By: Oneindia Kannada Video Team
Published : January 10, 2018, 03:41

ಮೋದಿ ವಿರುದ್ಧ ಜಿಗ್ನೇಶ್ ಮೇವಾನಿಯ ಹೂಂಕಾರ್ ರ‍್ಯಾಲಿ ಫ್ಲಾಪ್ ಶೋ

Subscribe to Oneindia Kannada

ದೆಹಲಿಯ ಪಾರ್ಲಿಮೆಂಟ್ ರಸ್ತೆಯಲ್ಲಿ ಕೇಂದ್ರ ಸರಕಾರದ ವಿರುದ್ದ ಗುಜರಾತ್ ವಡ್ಗಾಂ ಕ್ಷೇತ್ರದ ನೂತನ ಶಾಸಕ ಮತ್ತು ದಲಿತ ಮುಖಂಡ ಜಿಗ್ನೇಶ್ ಮೆವಾನಿ ನೇತೃತ್ವದಲ್ಲಿ ನಡೆದ ' ಯುವ ಹೂಂಕಾರ್ ರ‍್ಯಾಲಿ' ವಿಫಲಗೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರಬಹುದೆಂದು ದೆಹಲಿಯ ಪೊಲೀಸರು ಭಾರೀ ಭದ್ರತೆ ಒದಗಿಸಿದ್ದರು. ರ‍್ಯಾಲಿಯಲ್ಲಿ ಬೆರಳಣಿಕೆಯ ಸುಮಾರು ಮುನ್ನೂರು ಜನ ಮಾತ್ರ ಭಾಗವಹಿಸಿದ್ದರು. ಆ ಮೂಲಕ, ರಾಜಧಾನಿಯಲ್ಲಿ ಮೊದಲ ರ‍್ಯಾಲಿಯ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಭರ್ಜರಿ ಎಂಟ್ರಿ ಕೊಡಬಹುದು ಎನ್ನುವ ಮೆವಾನಿ ಲೆಕ್ಕಾಚಾರ ಉಲ್ಟಾ ಹೊಡೆದಿದೆ.ಮಂಗಳವಾರ (ಜ 9) ದೆಹಲಿ ಪೊಲೀಸರ ಅನುಮತಿ ನಿರಾಕರಣೆಯ ಹೊರತಾಗಿಯೂ ರ‍್ಯಾಲಿ ನಡೆಸಿ ಮಾತನಾಡಿದ ಜಿಗ್ನೇಶ್, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾತನಾಡಲು ಅವಕಾಶ ನೀಡದ ಮೋದಿ ಸರಕಾರ, ಗುಜರಾತ್ ಮಾದರಿ ಅಲ್ಲದೇ ಮತ್ತಿನ್ನೇನು ಎಂದು ಹೂಂಕರಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!