By : Oneindia Kannada Video Team
Published : December 21, 2017, 05:35

ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ವೈರಲ್

'ಆಸ್ಪತ್ರೆಗೆ ಸೇರಿಸುವ ಹೊತ್ತಲ್ಲಿ ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಉಸಿರಾಡುವ ಸ್ಥಿತಿಯಲ್ಲಿರಲಿಲ್ಲ' ಎಂಬ ಆಘಾತಕಾರಿ ಸತ್ಯವನ್ನು ಅವರು ದಾಖಲಾಗಿದ್ದ ಅಪೋಲೋ ಆಸ್ಪತ್ರೆಯ ಉನ್ನತಾಧಿಕಾರಿಯೇ ಬಯಲಿಗೆಳೆದಿದ್ದಾರೆ. ಈ ಸುದ್ದಿಯಿಂದಾಗಿ ಜಯಾ ಸಾವಿನ ನಿಗೂಢತೆಯ ಕುರಿತು ಮತ್ತಷ್ಟು ಕುತೂಹಲ ಮೂಡಿದೆ.ನಿಜಕ್ಕೂ, ಅವರ ಸಾವು ಬಗೆದಷ್ಟೂ ಮುಗಿಯದ ನಿಗೂಢಗಳ ಸಂತೆ! ಅವರು ಆಸ್ಪತ್ರೆಗೆ ಸೇರಿದಾಗಿನಿಂದ ಅಂದರೆ ಸೆಪ್ಟೆಂಬರ್ 22, 2016 ರಿಂದ ಡಿಸೆಂಬರ್ 05 2016 ರವರೆಗೂ ದಿನ ದಿನವೂ ಹುಟ್ಟುತ್ತಿದ್ದ ಅಂತೆ ಕಂತೆಗಳ ಪುರಾಣಕ್ಕೆ ಲೆಕ್ಕವಿಲ್ಲ. ಆದರೆ ಇಂದಿಗೂ ಅವರ ಸಾವು ಅವರ ಆಪ್ತರ ಮೇಲೊಂದಷ್ಟು ಅನುಮಾನವನ್ನು ಉಳಿಸಿ, ನಂಬಿಕೆದ್ರೋಹದ ಪ್ರತೀಕವೆಂಬಂತೆ ಕಾಣಿಸುತ್ತಿದೆ. ಇದೀಗ ಈ ಎಲ್ಲಾ ಕುತೂಹಲದೊಂದಿಗೆ ಇನ್ನೊಂದು ವಿಷ್ಯ ಅಂದ್ರೆ ಜಯಲಲಿತಾ ಆಸ್ಪತ್ರೆಯಲ್ಲಿರುವ ವಿಡಿಯೋ ವೈರಲ್ ಆಗಿದ್ದು ಇನ್ನಷ್ಟು ಅನುಮಾನಗಳು ಮೂಡಿಸುತ್ತಿವೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!