By : Oneindia Kannada Video Team
Published : March 09, 2018, 01:31

ಜಯಲಲಿತಾ ಕಾರ್ ಡ್ರೈವರ್ ಅಮ್ಮನ ಬಗ್ಗೆ ಬಾಯ್ಬಿಟ್ಟ ಸತ್ಯ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಒಂದು ಕಾಲು ಮತ್ತು ಅವರ ಬೆರಳುಗಳನ್ನು ಕತ್ತರಿಸಲಾಗಿತ್ತು ಎಂಬ ವದಂತಿಗೆ ಸಂಬಂಧಿಸಿದಂತೆ, ಜಯಲಲಿತಾ ಅವರ ಕಾರ್ ಡ್ರೈವರ್ ಅಯ್ಯಪ್ಪನ್ ಮಾತನಾಡಿದ್ದಾರೆ. ಜಯಲಲಿತಾ ಸಾವಿನ ಕುರಿತಂತೆ ಸಾಕ್ಷಿಗಳನ್ನು ದಾಖಲಿಸಿಕೊಳ್ಳುತ್ತಿರುವ ತನಿಖಾ ಆಯೋಗ ಮಾ.8 ರಂದು ಜಯಲಲಿತಾ ಅವರ ಕಾರಿನ ಡ್ರೈವರ್ ಅಯ್ಯಪ್ಪನ್ ಅವರ ವಿಚಾರಣೆ ನಡೆಸಿತು. 1991 ರಿಂದ ಜಯಲಲಿತಾ ಅವರ ಕಾರ್ ಚಾಲಕನಾಗಿ, ನಿಷ್ಠಾವಂತರಾಗಿ ಕೆಲಸ ಮಾಡುತ್ತಿರುವ ಅಯ್ಯಪ್ಪನ್, ಅವರ ಕಾಲು ಮತ್ತು ಕೈ ಬೆರಳುಗಳನ್ನು ಕತ್ತರಿಸಲಾಗಿತ್ತು ಎಂಬ ವದಂತಿಯನ್ನು ಸಾರಾಸಗಟು ಅಲ್ಲಗಳೆದರು. ವಿಚಾರಣೆಯ ಸಮಯದಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾದಾಗಿನಿಂದ, ಸಾಯುವವರೆಗಿನ ಕೆಲವು ವಿಷಯಗಳನ್ನು ಅವರು ತೆರೆದಿಟ್ಟರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!