By : Oneindia Kannada Video Team
Published : February 06, 2018, 01:51

ಜಮ್ಮು ಕಾಶ್ಮೀರದ ಶ್ರೀನಗರದ ಆಸ್ಪತ್ರೆ ಮೇಲೆ ಭಯೋತ್ಪಾದಕ ದಾಳಿ

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಶ್ರೀ ಮಹಾರಾಜ ಹರಿಸಿಂಗ್ ಆಸ್ಪತ್ರೆಯ ಮೇಲೆ ಭಯೋತ್ಪಾದಕ ದಾಳಿ ನಡೆದಿದ್ದು, ಆತಂಕ ಸೃಷ್ಟಿಯಾಗಿದೆ. 6 ಕೈದಿಗಳನ್ನು ಕೇಂದ್ರ ಕಾರಾಗೃಹದಿಂದ ಕರೆದುಕೊಂಡು ಬರಲಾಗಿತ್ತು. ಕೈದಿಗಳನ್ನು ಇಲ್ಲಿನ ಆಸ್ಪತ್ರೆಗೆ ಕರೆತಂದಾಗ ಪೊಲೀಸರ ಬಳಿಯಿಂದ ಪಿಸ್ತೂಲ್ ಕಸಿದ ಕೈದಿಯೊಬ್ಬ ಪೊಲೀಸರ ಮೇಲೇ ದಾಳಿ ನಡೆಸಿದ್ದಾನೆ. ಪೊಲೀಸರು ಪ್ರತಿ ದಾಳಿ ನಡೆಸಿದರಾದರೂ ಅಷ್ಟರಲ್ಲಾಗಲೇ ಲಶ್ಕರ್ ಇ ತೊಯ್ಬಾ ಸಂಘಟನೆಯ ಓರ್ವ ಭಯೋತ್ಪಾದಕ ಮತ್ತು ಒಬ್ಬ ಪಾಕ್ ಕೈದಿ ಪರಾರಿಯಾಗಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!