By: Oneindia Kannada Video Team
Published : November 29, 2017, 06:03

ಇವಾಂಕಾ ಟ್ರಂಪ್ ರನ್ನ ಹಿಗ್ಗಾ ಮುಗ್ಗಾ ಥಳಿಸುತ್ತಿದೆ ಅಮೇರಿಕಾ ಮಾಧ್ಯಮ

Subscribe to Oneindia Kannada

ಇವಾಂಕಾರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದೆ ಅಮೆರಿಕ ಮಾಧ್ಯಮ! ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಶೃಂಗಸಭೆ (ಜಿಇಎಸ್) ಯಲ್ಲಿ ಭಾಗವಹಿಸುವುದಕ್ಕಾಗಿ ಹೈದರಾಬಾದಿಗೆ ಬಂದಿರುವ ಇವಾಂಕಾ ಟ್ರಂಪ್, ಈಗಾಗಲೇ ಭಾರತದಾದ್ಯಂತ ತಮ್ಮ ಹವಾ ಸೃಷ್ಟಿಸಿದ್ದಾರೆ. ಭಾರತೀಯ ಮಾಧ್ಯಮಗಳಂತೂ ಗ್ಲಾಮರ್ ಬೊಂಬೆ ಇವಾಂಕಾರಿಗೆ ನಿನ್ನೆ(ನ.28)ಯಿಡೀ ಸಾಕಷ್ಟು ಪ್ರಚಾರ ನೀಡಿವೆ.ಆದರೆ ಅಮೆರಿಕ ಮಾದ್ಯಮಗಳು ಮಾತ್ರ ಇವಾಂಕಾ ಭಾರತ ಭೇಟಿಯನ್ನು ಋಣಾತ್ಮಕವಾಗಿ ಚಿತ್ರಿಸುತ್ತಿವೆಯೇ? ದೊಡ್ಡಣ್ಣನ ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಬಕ್ಕೆ ಈ ಚೆಂದುಳ್ಳಿ ಚೆಲುವೆ ಮೇಲೆ ಮುನಿಸಾದರೂ ಯಾಕೆ?ಅಮೆರಿಕ ಮಾಧ್ಯಮಗಳು ಇವಾಂಕಾ ಭಾರತ ಭೇಟಿಯನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುವುದಕ್ಕೆ ಕಾರಣವಿದೆ. ಹಾಗೆ ನೋಡುವುದಕ್ಕೆ ಹೋದರೆ ಅಲ್ಲಿನ ಮಾಧ್ಯಮಗಳ ಅಭಿಪ್ರಾಯವನ್ನು ಅಲ್ಲಗಳೆಯುವಂತೆಯೂ ಇಲ್ಲ. ಏಕೆಂದರೆ ಜಾಗತಿಕ ವೇದಿಕೆಯೊಂದರಲ್ಲಿ ನೂರಾರು ದೇಶಗಳ ಜೊತೆ, ಅಮೆರಿಕದಂಥ ದೈತ್ಯ ರಾಷ್ಟ್ರದ ಪ್ರತಿನಿಧಿಯನ್ನಾಗಿ ಕೇವಲ ಅಧ್ಯಕ್ಷರ ಸಲಹೆಗಾರರನ್ನು ಕಳಿಸುವುದು ಸರಿಯೇ? ಇದರಿಂದ ಅಮೆರಿಕದ ಮರ್ಯಾದೆ ಏನಾದೀತು ಎಂಬ ಪ್ರಶ್ನೆಯನ್ನು ತಪ್ಪು ಎನ್ನುವುದು ಹೇಗೆ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!